Category: ಬಂಗಾಡಿ

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ ಲೇಖನ, ಕವನಗಳ ಸಂಗ್ರಹ

ತುಳು ಭಾಷೆಡೆ ಸುರುತ ತುಳು ಪುರ್ಸಂಗ

ಕನ್ನಡ ಪುರ್ಸಂಗ ಬರೆಯಿಲೆಕ್ಕನೇ ಕನ್ನಡ ಪದ್ಯೊಡು ಪುರ್ಸಂಗ ಬರೆದ್ ತುಳು ಆಟೊಗು ಅನುಮನ್ತ್ ಕೊರ್ತಿನ ಪುದಾರ್ದ ಕವಿಕುಳು ಇತ್ತೆರ್. ಆಂಡ ತುಳು ಭಾಷೆಡೆ ಸುರೂಟು ತುಳು ಪುರ್ಸಂಗ ರಚನೆ ಆಯಿನವು ಪೆರ್ವಡಿ ಸಂಕಯ್ಯ ಭಾಗವತೆರೆಡ್ದ್. ಆರ್, ಪಂಚವಟಿ ವಾಲಿ ಸುಗ್ರಿವೆರೆ ಕಾಳಗೊನು…

ಯಾಕೇ..? ಹುಟ್ಟು (ಪಂಚಗವ್ಯ)

ಏಕೆಪುಟ್ಟಿದ ನೀನು, ಈ ಭೂಮಿಯೊಳಗೆ |ಬೇಕು ಬೇಡಗಳಿಲ್ಲಿ, ಉಂಟೆಂಬ ಭ್ರಮೆಗೆ ॥ಪ॥ ಸಿರಿಸಂಪದಭಾಗ್ಯ ಶೇಖರಿಸಿಯಿಟ್ಟು |ಸರಸಕ್ಕೆ ತರುಣಿಯರಿಹರೆಂಬ ಗುಟ್ಟು ॥ಪರರಹಿಂಸಿಸಿ ತನ್ನವರಸಾಕಿ ನೀನು |ಪೊರಟೆಯಲ್ಲವೇ.? ಓರ್ವ, ಬರಲಾರರೇನು ॥೧॥ ಮಸಣದೊಳಗಿಹಕಾಷ್ಟಕೇರಿಸುತ ಸುಟ್ಟು |ಪಿಸುಣರು ಒಂದಾಗಿ, ಕೆಲದಿನವೆಬಿಟ್ಟು ॥ಮಸೆವರೈಕತ್ತಿಯನು, ನಿನ್ನಧನಕ್ಕಾಗಿ |ರಸೆಯಲ್ಲಿ ಸಂಪದವ,…

ಕಾಪಾಡು ಓತಾಯಿ (ಪಂಚಗವ್ಯ)

ಸಚರಾಚರದ ಶಕ್ತಿ, ಕಾಪಾಡು ಓತಾಯಿ |ಶುಚಿಯಾದ ಬಾಳುವೆಗೆ, ಮನಮಾಡುವಂತೆ॥ಪ॥ ಸಿರಿಭಾಗ್ಯದಮಲಿನಲಿ, ಪಾಪಿಯಾದೆವುಯಿಂದು |ನೆರೆಯವರ, ಹಿಂಸಿಸುತ ಮದದೊಳಗೆ ಕುಣಿದು ॥ಬರಿಗುಲ್ಲುಯೆಬ್ಬಿಸುವ, ಸುಕದಸುಪ್ಪತ್ತಿಗೆಗೆ ॥೧॥ ಧೀನದಲಿತರಕಂಡು, ದಾನಧರ್ಮವ ಮಾಡೆ|ನಾನುಮನವಿಡದಿಂದು ಕೆಟ್ಟುಹೋಗಿಹೆನು॥ಮಾನಿನಿಯು ಮದಿರೆಯದು ಬೇಕೆಂದು ತೂಕಡಿಸಿ ।ಹೀನತನದೊಳು ಬದುಕು ಸಾಗಿಸಿದೆ ತಾಯೇ ॥೨॥ ಪ್ರೀತಿಸದೆ ಬಡಜನರ…

ಧರಣಿದೇವಿ (ಪಂಚಗವ್ಯ)

ಧರಣಿ ದೇವಿಯೆ ಹಸಿರು ಸೀರೆಯುಡುತಲಿನಿಂತೆ।ಪರಮಕೋಮಲೆ, ನಿನ್ನ, ಸೊಬಗ ನೋಡುತಲಿ॥ ಶಿರವಾಗುತಿಹೆತಾಯೆ ನಿನ್ನದಂಡಿಪಜನರ।ಕರೆದುಬದ್ದಿಯಪೇಳು, ಮೌನದಿಂದಿರದೆ॥೧॥ ನೆರಳನೀಡುವವೃಕ್ಷ, ಕಡಿದುರುಳಿಸಿನಿಂತ।ದುರುಳರನು ನೋಡವ್ವ, ಫಲಪುಷ್ಪವಿಲ್ಲ ॥೨॥ ಧರಣಿಯೊಳು ಪ್ರಾಣವಾಯುವುಕಾಣದಿರೆಬಾಳು।ಸೊರಗಿಸಾಯುವಯೋಗ, ವಿರುವುದದುಯಿಂದೆ ॥೩॥ ಪರಿಸರವ ಉಳಿಸಯ್ಯ, ಗಿಡಮರದ ಬೆಳೆಸಯ್ಯ ।ಉರಿಬಿಸಿಲ ಬೇಗೆಯಿಂ ನೆರಳಿನಾಶ್ರಯನೀಡಿ ॥೪॥ ಪರಮಮಂತ್ರವೆನಮ್ಮ ಸ್ವಚ್ಛತೆಯ ಜೀವನವು…

ಸೂರ್ಯ (ಪಂಚಗವ್ಯ)

ಏಕಚಕ್ರದರಥದಿ, ಏಳುಕುದುರೆಯಕಟ್ಟಿ ।ಏಕಪಥದಲಿಸಾಗುತಿರುವ, ದಿನಮಣಿಯೆ ॥ಲೋಕದೊಳು ಕರ್ತವ್ಯಕಾದರ್ಶ ನೀನಾದೆ ।ಏಕೆ ಈ ಏಳುವರ್ಣದಿ ಕೂಡಿ ನಲಿದೆ ॥೧॥ ಅರುಣಸಾರಥಿಯಾದ, ಏಳುಗ್ರಹಗಳು ಸೇರಿ ।ಎರಡುವಾಯುವ್ಯಕಾಯಗಳಲ್ಲಿ, ತಿರುಗೇ ॥ಧರಣಿಯೊಳು ಜನಮನವ ಎಚ್ಚರಿಸಿ ಮುನ್ನಡೆವೆ ।ಇರುಳು ಹಗಲೆಂದೆನುವ, ನೇಮವ ಸಾರಿ ॥೨॥ ಶನಿಶುಕ್ರ ಗುರುಕುಜರು ಬುಧಚಂದ್ರರಾಹುಗಳು…

ಹರಿದ ಅಂಗಿ (ಪಂಚಗವ್ಯ)

ಹರಿದುಹೋಗಿದೆ ಅಂಗಿ, ಬರಿದೆನಗುವರು ನೋಡಿ।ಇದನೀಗ ತೆಗೆದುಗೆದು, ಮುದದಿಬಾರಯ್ಯ ॥ಪ॥ ಗಾಳಿಬಿಸಿಲಿಗೆದೇಹ ಒಡ್ಡಿಬದುಕಿದರೇನು.?।ಬಾಳುವಾಸೆಯು ಯಾಕೆ..? ಮರುಳೆ ವೋ- ಮನುಜ ॥೧॥ ಅಂತರಂಗದಿ ಕಣ್ಣು, ತೆರೆದು ನೋಡಲುಕಾಂಬೆ।ಸಂತಸವು ಇನಿತಿಲ್ಲ, ಧರಣಿಯೊಳು ತಿಳಿಯೋ ॥೨॥ ಸತಿಸುತರು ನೋಡುವರು, ನಿನ್ನಸಿರಿ ಸಂಪದವ ।ಮತಿಗೆಟ್ಟು ನಿನ್ನವರು ನಿನಗಿಹರು ಯೆಂದು…

ಅಂತ್ಯಯಾವಾಗ..? (ಪಂಚಗವ್ಯ)

ಅಂತ್ಯನಿನಗಾವುದು, ಪ್ರಾಣಹರಣದ ಕಾಲ |ಅಂತ್ಯವಾಗುವುದಂದು, ಆರುವೈರಿಗಳಿಂಗೆ||ಅಂತ್ಯಸುಖ ದುಃಖಗಳು ಅವಸಾನಕಾಲದಲಿ|ಅಂತ್ಯಜೀವನದಾಟ ಮುಗಿದುಹೋಗಲುಯಿಲ್ಲಿ |‌|೧|| ಯಾರ ಕರೆದರುಬರುವವರಿಲ್ಲ ನಿನ್ನೊಡನೆ|ಯಾರನೆರವದು ಸಿಗದು ವೇದನೆಗೆ ನೀನೆ ||ಯಾರಿಲ್ಲ ಎನುತಿಂದು ನೀನಾಶೆ ಬಿಡುತಿರಲು|ತೋರುವುದು ಪಥವೊಂದು ತೆರಳುವೆಯಪೇಳು||೨|| ಅಲ್ಲಿಹುದು ಪೂರ್ವಕರ್ಮದ ಘೋರ ನೋಟ |ಇಲ್ಲಿಹುದು ನೀಗೈದ ತಪ್ಪುಗಳ ಆಟ||ಮೆಲ್ಲನಡಿಯಿಟ್ಟೊಮ್ಮೆ ನೋಡು…

ದಿನಮಣಿ (ಪಂಚಗವ್ಯ)

ಮೂಡಿಬಾ ದಿನಮಣಿಯೆ, ಮೂಡಣದ ಶಿಖರದಲಿ ।ರೂಢಿಯನು ನೀನೋಡಿ, ನಗುತ ಹೊಳೆಹೊಳೆದು ॥ನಾಡಜನರೆಚ್ಚೆತ್ತು ಕಣ್ತೆರೆದು ಕರಮುಗಿದು ।ಕೂಡಿ ಕೃಷಿ ಕರ್ಮಗಳಿಗೆಂದೆ ಪೊರಟಿಹರು ॥೧॥ ಬಸವಕೊರಳಿನ ಗಂಟೆ ಸ್ವರನಾದದಿಂತಾನು ।ಬಸವಳಿಯದಂತೆರೈತನಹಾಡಕೇಳಿ॥ಹಸನಾಗಿ ಭೂಮಿಯನು ಉಳಲುಸಹಕರಿಸುವನು ।ಫಸಲು ಪಡೆಯುವಯೋಗಿ, ಸಂತಸದಿ ನಲಿಯೆ ॥೨॥ ಉತ್ತುಬಿತ್ತಿದನೆಲದಿ ಬೆಳೆದಬೆಳೆಯನುಕಂಡು ।ಚಿತ್ತದಲಿ…

ಚದುರಂಗ (ಪಂಚಗವ್ಯ)

ಆಡುವೆಯ ಚದುರಂಗ, ಜಗದರಂಗವೆನಿನಗೆ।ಕೇಡಾಗದೈಯೆನುತ, ಮನದುಂಬಿನಲಿವೆ॥ಕೂಡಿಡಲು ಧನಕನಕ ಚೋರರದೆ ಪಾಲಾಗೇ।ಬಾಡುತಿಹೆ ಯಾಕೀಗ ಸಂಪದವು ಕಳೆಯೇ॥೧॥ ಹುಚ್ಚನೆಂದೆನಲೋರ್ವ ಹುಚ್ಚನಿಜ ತಾನಂದು।ಹುಚ್ಚ ನೆಂದರೆಹುಚ್ಚು ಬಿಡುವುದೈ ನಿಜವು॥ಹಚ್ಚದೆಯೆಸೊಡರನ್ನು ಕತ್ತಲೆಯೊಳಿಹೆ ಯಾಕೆ.?।ಇಚ್ಛೆಯಿದು ನಿನಗಿಲ್ಲ ಬೆಳಕನೋಡಲಿಕೆ॥೨॥ ದೂರದಿಂ ಕಾಣುತಿಹೆ ಮೋಕ್ಷದಾ ಮಾರ್ಗವದು।ಹಾರಿಹೋಗಲುನಿನಗೆ, ಆಗದೈಮನುಜ॥ಸಾರುನೀ ಪಾಪವೆಂಬುವ ಮುಳ್ಳ ಸುರಿಸುತಲಿ।ತೋರುವುದು ಸುಕೃತಫಲದಚ್ಚರಿಯತಿಳಿಯೋ॥೩॥ ಬರಬೇಕು…

ಧರ್ಮ ಸೂಕ್ಷ್ಮ (ಪಂಚಗವ್ಯ)

ಸುರಿಸೆಧನಕನಕವನು ಪಾಪ ಮಾಡಲು ಮನವ।ಹರಿಯ ಬಿಟ್ಟಿಹೆಯಾಕೆ ? ಈ ಬಾಳ್ವೆಯಲ್ಲಿ ॥ನೆರೆಯವನ ಕಂಡರಾಚಣ ಮತ್ಸರ ದಿಕುದಿವೆ ।ಬೆರೆತು ಮಿತ್ರನಕೂಡಿ ಕಾಳಗವ ಕೊಡುವೆ॥೨॥ ಧರೆಯಧರ್ಮಕೆ ನೀನು, ಮಾರುಹೋದೆಯ ಮನುಜ ।ಸರಿಯೆ ಪ್ರಕೃತಿಯನಿಯಮ ಈ ಜನ್ಮ ನಿನಗೆ॥ಸರಸಕಿಹಳೆಂದು ನೀ ಸತಿಯನಂಬುತಬಾಳ್ದೆ ।ವಿರಸಬಂದರೆ ಶಿಕ್ಷಿಸಲುಮುಂದೆಬರುವೆ॥೧॥ ಉಂಡುಮಲಗುತಬಹಳ…