ಸುರಿಸೆಧನಕನಕವನು ಪಾಪ ಮಾಡಲು ಮನವ।
ಹರಿಯ ಬಿಟ್ಟಿಹೆಯಾಕೆ ? ಈ ಬಾಳ್ವೆಯಲ್ಲಿ ॥
ನೆರೆಯವನ ಕಂಡರಾಚಣ ಮತ್ಸರ ದಿಕುದಿವೆ ।
ಬೆರೆತು ಮಿತ್ರನಕೂಡಿ ಕಾಳಗವ ಕೊಡುವೆ॥೨॥

ಧರೆಯಧರ್ಮಕೆ ನೀನು, ಮಾರುಹೋದೆಯ ಮನುಜ ।
ಸರಿಯೆ ಪ್ರಕೃತಿಯನಿಯಮ ಈ ಜನ್ಮ ನಿನಗೆ॥
ಸರಸಕಿಹಳೆಂದು ನೀ ಸತಿಯನಂಬುತಬಾಳ್ದೆ ।
ವಿರಸಬಂದರೆ ಶಿಕ್ಷಿ
ಸಲುಮುಂದೆಬರುವೆ॥೧॥

ಉಂಡುಮಲಗುತಬಹಳ ಕನಸಕಾಣುವೆಯಾಕೆ?।
ಹಿಂಡುತಿಹ ಕಷ್ಟಗಳ ಬಗೆಯಯೋಚಿಸದೇ॥
ಕಂಡವರ ಕರೆದಲ್ಲಿ ದಾನಧರ್ಮವನೀಡು।
ಕೊಂಡುಪೋಗಲಿ ನಿನ್ನ ಪಾಪಗಳ ಹಂಚಿ ॥೩॥

ನಿನ್ನ ಪಶುಕೃಷಿಗೃಹಕೆ, ನೀನೆ ಒಡೆಯನುಯೆಂಬೆ।
ನಿನ್ನಂತ್ಯದಲಿಯಾರ ಭೋಗ್ಯವದೊ, ತಿಳಿಯೆ॥
ನಿನ್ನ ಮಗ ಸಂಪದವ ಉಳಿಸುವನೆ ಸತಿಯೊಡನೆ।
ಬಣ್ಣಗುಂದಿಸಿಬಿಡುವ
ಬದುಕಬೇಡೆಂದು॥೪॥

ಸೋದರರು ಇಹರೆನಗೆ ಬಂಧುಗಳು ಬಹರೆಂದು।
ಮೇಧಿನಿಯನಾಳುತಿಹೆನೆಂದುಬ್ಬ ಬೇಡ॥
ಆಧರಿಸುವವರಿಲ್ಲ, ಅಂತ್ಯ ಕಾಲಕೆ ಮನುಜ।
ಮಾಧವನೆ ಗತಿಯೆಂಬ ಸತ್ಯವನುತಿಳಿಯೊ॥೫॥

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.

✍🏻 : ದಿ। ಕೆ ಅನಂತರಾಮ ಬಂಗಾಡಿ

ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ