ಏಕೆಪುಟ್ಟಿದ ನೀನು, ಈ ಭೂಮಿಯೊಳಗೆ |
ಬೇಕು ಬೇಡಗಳಿಲ್ಲಿ, ಉಂಟೆಂಬ ಭ್ರಮೆಗೆ ॥ಪ॥

ಸಿರಿಸಂಪದಭಾಗ್ಯ ಶೇಖರಿಸಿಯಿಟ್ಟು |
ಸರಸಕ್ಕೆ ತರುಣಿಯರಿಹರೆಂಬ ಗುಟ್ಟು ॥
ಪರರಹಿಂಸಿಸಿ ತನ್ನವರಸಾಕಿ ನೀನು |
ಪೊರಟೆಯಲ್ಲವೇ.? ಓರ್ವ, ಬರಲಾರರೇನು ॥೧॥

ಮಸಣದೊಳಗಿಹಕಾಷ್ಟಕೇರಿಸುತ ಸುಟ್ಟು |
ಪಿಸುಣರು ಒಂದಾಗಿ, ಕೆಲದಿನವೆಬಿಟ್ಟು ॥
ಮಸೆವರೈಕತ್ತಿಯನು, ನಿನ್ನಧನಕ್ಕಾಗಿ |
ರಸೆಯಲ್ಲಿ ಸಂಪದವ, ಕೂಡಿಟ್ಟೆ ಭೋಗಿ॥೨॥

ಅಧಿಕಾರ ಎನಗಿಹುದು, ಯೆಂದಾಗಕುಣಿದೆ|
ಮದದಿಂದ ಕೊಲ್ಲಿಸಿದೆ, ಸಂಪದಕೇಂದೇ ॥
ಹೃದಯ ಬಡಿತವು ನಿಲ್ಲುತಿರುವಂತಕಾಲ |
ಒದಗದು ನಿನಗಧಿಕಾರಯಿನ್ನಿಲ್ಲ ॥೩॥

ಹರಿವಗಂಗೆಯೊಳಿಳಿದರಿ ಪಾಪಕಳೆವ |
ಹಿರಿಯರ ವಾಕ್ಯವ ನಂಬದಿರಯ್ಯ ॥
ಪರಹಿತಗೈಯ್ಯದೆ, ಬದುಕಲಿಮೆರೆದು |
ಪರಮತೀರ್ಥಕೆಪೋಪೆ, ಯಾಕಯ್ಯ ಯಿಂದು ॥೪॥

ನಿನ್ನಂತರಂಗವು, ಶುದ್ದಿಯಾಗುವರೆ |
ಪನ್ನಗ ಭೂಷಣ, ಶಿವನನ್ನು ನೆನೆಯೋ ॥
ಇನ್ನುತಾಮಸವೇಕೆ.?, ಮನುಜನೆ ಹಿತದಿ ॥೫॥

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.

ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ