ಸಚರಾಚರದ ಶಕ್ತಿ, ಕಾಪಾಡು ಓತಾಯಿ |
ಶುಚಿಯಾದ ಬಾಳುವೆಗೆ, ಮನಮಾಡುವಂತೆ॥ಪ॥

ಸಿರಿಭಾಗ್ಯದಮಲಿನಲಿ, ಪಾಪಿಯಾದೆವುಯಿಂದು |
ನೆರೆಯವರ, ಹಿಂಸಿಸುತ ಮದದೊಳಗೆ ಕುಣಿದು ॥
ಬರಿಗುಲ್ಲುಯೆಬ್ಬಿಸುವ, ಸುಕದಸುಪ್ಪತ್ತಿಗೆಗೆ ॥೧॥

ಧೀನದಲಿತರಕಂಡು, ದಾನಧರ್ಮವ ಮಾಡೆ|
ನಾನುಮನವಿಡದಿಂದು ಕೆಟ್ಟುಹೋಗಿಹೆನು॥
ಮಾನಿನಿಯು ಮದಿರೆಯದು ಬೇಕೆಂದು ತೂಕಡಿಸಿ ।
ಹೀನತನದೊಳು ಬದುಕು ಸಾಗಿಸಿದೆ ತಾಯೇ ॥೨॥

ಪ್ರೀತಿಸದೆ ಬಡಜನರ ಘಾತಿಸಿದೆ ದುರಿತದಲಿ |
ಭೂತಳದಿನಾಪಾಪಿಯಾದೆ ನಿಜ ವರಿತು ॥
ಭೂತನಾಥನಸತಿಯೆ ನಿನ್ನಮರೆಹೊಕ್ಕಿಹೆನು |
ಮಾತೆಎನ್ನಯತಪ್ಪು, ಮನ್ನಿಸುತ ಪೊರೆಯೋ ॥೩॥

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.

ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ
ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ