ಕೆಲವು ನಕ್ಷತ್ರಗಳು ತಿಥಿಗಳು ವಾರಗಳು ಶಿಶುವಿನ ಕೇಶ ಖಂಡನ ಮತ್ತು ಕ್ಷೌರಕ್ಕೆ ಶುಭದಾಯಕವಾದರೆ ಇನ್ನೂ ಕೆಲವು ಅಶುಭಕರವಾಗಿದೆ.

ಕೇಶ ಖಂಡನ ಕಾಲಗಳು ಯಾವುವು..?

ಅಶ್ವಿನಿ, ಪುಷ್ಯ, ಪುನರ್ವಸು, ಮಖ, ಸ್ವಾತಿ, ರೇವತಿ, ಶ್ರವಣ, ಧನಿಷ್ಟಾ, ಶತಭಿಷಾ, ಈ 9 ನಕ್ಷತ್ರಗಳು ಶುಭಕರವಾಗಿದೆ ಅಲ್ಲದೆ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರಗಳಲ್ಲಿಯೂ 2,3,5,7,10,13 ಈ ತಿಥಿಗಳಲ್ಲಿಯೂ ಶಿಶುವಿಗೆ ಕೇಶ ಖಂಡನ ಶುಭಕರವಾಗಿದೆ.

ಕ್ಷೌರಕ್ಕೆ ಶುಭದಿನ ಯಾವುದು…?

ಪುಷ್ಯ, ಪುನರ್ವಸು, ರೇವತಿ, ಹಸ್ತ, ಶ್ರವಣ, ಧನಿಷ್ಟಾ, ಮೃಗಶಿರಾ, ಅಶ್ವಿನಿ, ಚಿತ್ತಾ, ಜ್ಯೇಷ್ಠಾ, ಶತಭಿಷಾ, ಸ್ವಾತಿ ಈ ಹನ್ನೆರಡು ನಕ್ಷತ್ರಗಳಲ್ಲಿ ಕ್ಷೌರವು ಶುಭಕರವು.

ಕ್ಷೌರವರ್ಜ್ಯ ಕಾಲ ಯಾವುದು…?

ಚತುರ್ಥಿ, ಷಷ್ಠಿ, ಚತುರ್ದಶಿ, ಪಂಚಪರ್ವಗಳು, ಪಾಡ್ಯಮಿ, ನವಮಿ, ಅಷ್ಟಮಿ ಈ ತಿಥಿಗಳಲ್ಲಿ ಕ್ಷೌರವು ಅಶುಭಕರವಾಗಿದೆ.

ಚತುರ್ಥದಲ್ಲಿ ತಾಯಿಗೂ, ಷಷ್ಠಿಯಲ್ಲಿ ಅಣ್ಣನಿಗೂ, ಚತುರ್ದಶಿಯಲ್ಲಿ ಹೆಂಡತಿಗೂ, ಪಂಚಪರ್ವಗಳಲ್ಲಿ ತಂದೆಗೂ, ಪಾಡ್ಯ ಮತ್ತು ನವಮಿಗಳಲ್ಲಿ ಧನ ಧಾನ್ಯ ನಾಶ, ಅಷ್ಟಮಿಯಲ್ಲಿ ಕ್ಷೌರ ಮಾಡಿಸಿದಲ್ಲಿ ಕುಟುಂಬಹಾನಿಯೂ, ತೊಂದರೆಗಳೂ ಸಂಭವಿಸಬಹುದು

ಸಂಗ್ರಹ