ಅರುಣಕ ಜಗತ್ಕಾರು ಮುನೀಂದ್ರ ದಂಪತಿಗೆ ಜನಿಸಿದ ಮಹನೀಯ ಆಸ್ತಿಕ. ತಾಯಿ ಜಗತ್ಕಾರುವಿನ ಆದೇಶದಂತೆ ಸರ್ಪಕುಲವನ್ನೇ ರಕ್ಷಿಸಿದ ಈತ ನಾಗಕುಲದ ಪ್ರಮುಖನಾದ ವಾಸುಕಿಯ ಅಳಿಯ.

ಸರ್ಪಕುಲವನ್ನೇ ನಾಶ ಮಾಡಲು ಹೊರಟ ಪರೀಕ್ಷಿತ ರಾಜನ ಮಗ ಜನಮೇಜಯನು ಸರ್ಪ ಯಾಗ ಮಾಡುತ್ತಾನೆ ಇದರಿಂದ ಎಲ್ಲಾ ಸರ್ಪಗಳು ಯಾಗ ಕುಂಡಕ್ಕೆ ಬಿದ್ದು ಸಾಯುತ್ತವೆ. ಕೊನೆಗೆ ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಸರ್ಪವನ್ನು ಯಾಗಕ್ಕೆ ಸ್ವಾಹಾಕಾರದಿಂದ ಅಹ್ವಾನಿಸಲಾಗುತ್ತದೆ ಇಂತಹ ಅಪತ್ಕಾಲದಲ್ಲಿ ಆಸ್ತಿಕನು ವಿಕರ್ಷಣ ಮಂತ್ರದಿಂದ ಉದ್ವಾಸನೆ ಮಾಡುವ ಮೂಲಕ ತಕ್ಷಕನನ್ನು ರಕ್ಷಿಸುತ್ತಾನೆ. ಆದ್ದರಿಂದ ಸಕಲ ಸರ್ಪಕುಲಕ್ಕೆ ಸರ್ಪದೇವತೆಗಳಿಗೆ ಆರಾಧ್ಯ, ಅಭಿಮಾನ ಪಾತ್ರ.

ಸರ್ಪಗಳಲ್ಲಿ ಐದು ಸರ್ಪಜಾತಿಗಳಿವೆ. ಅದರಲ್ಲಿನ ಮಹಾಸರ್ಪಗಳ ವಿವಿಧ ಹೆಸರು ಹಾಗೂ ವಿವರ ಇಲ್ಲಿದೆ
- ವಾಸುಕಿ ವಂಶ ಸರ್ಪ:
- ಕೋಟೀಶ, ಮಾನಸ, ಪೂರ್ವಶಲ, ಪಾಲಹಾಲ್ಮಕ, ಪಿಚ್ಚಿಕ ಕೌಣಪ, ಚಕ್ರಕಾಲವೇಗ, ಪ್ರಕಾಲನ, ಹಿರಣ್ಯ, ಬಾಹು, ಶರಣ, ಕಕ್ಷಕ, ಕಾಲದಂತ.
- ತಕ್ಷಕ ವಂಶಕ್ಕೆ ಸೇರಿದ ಸರ್ಪಗಳು:
- ಪುಚ್ಚಾಂಡಕ, ಮಂಡಲಕ, ಪಿಂಡನೇಕ, ರಣೇಭಕ, ಉಚ್ಚಿಖ, ಶರಭ, ಭಂಗ, ಬಿಲ್ವುತೇಜ, ವಿರಹೇರ, ಶಿವಿ, ಶಂಕರ, ಮೂಕ, ಸುಕುಮಾರ, ಪ್ರಸೇನವ, ಮುದ್ಗರ, ಶಿಶುರೋಮ, ಸುರೋಮ, ಮಹಾಹನಃ.
- ಐರಾವತ ಕುಲ ಸರ್ಪಗಳು :
- ಪಾರಾವತ, ಪಾರಿಜಾತಿ, ಪಾಂಡವ, ಹರಿಣ, ಕೃಷ, ವಿಹಂಗ, ಮೋದ, ಪ್ರಮೋದ, ಸಂಹಾತಿ.
- ಕೌರವ ಕುಲ ಸರ್ಪಗಳು :
- ನೇರಕ, ಕುಂಡಲವೇಣಿ, ವೇಣಿಸ್ಕಂ, ಕುಮಾರಕ, ಬಾಹುಕ, ಧೂರಕ, ಪ್ರಾತರಾತಕ.
- ಧೃತರಾಷ್ಟ್ರ ಕುಲ ಸರ್ಪಗಳು:
- ಶಂಕು, ಕರ್ಣ, ಪಿಠರಕ, ಕುಠಾರ, ಸುಖಸೌಚಕ, ಪೂರ್ಣಾಂಗಧ, ಪೂರ್ಣಮುಖ, ಪ್ರಹಾಸ ಶಕುನಿ, ದರ್ಯ, ಮಾಹೋಠ, ಕಾಮಠಕ, ಸುಷೇಣ, ಮಾನಸ, ಅವ್ಯಯ, ಭೈರವಮುಂಡ, ವೇದಾಂಗ, ಪಿಶಂಗ, ಚೋದ್ರಪಾರಕ ವೃಷಭ, ವೇದಾವತ ಪಿಂಡಾರಕ, ಮಹಾಹನು, ರಕ್ತಾಂಗ, ಸರ್ವಸಾರಾಂಗ ಸಮೃದ್ಧ ಏವಾಸಕ, ವರಾಹಕ, ವರಣಕ, ಸುಚಿತ್ರಿ, ಚಿತ್ರವೇಣಿಕ, ಪರಾಶಕ, ತರುಣಕ, ಮಣಿಸ್ಕಂಧ.