“ಯದ್ಭಾವಂ ತದ್ಭವತಿ”
ಅಂದರೆ ನಾವು ಯಾರನ್ನೇ ಆಗಲಿ ಅಥವಾ ಯಾವುದನ್ನೇ ಆಗಲಿ ಯಾವ ದೃಷ್ಟಿಯಿಂದ ನೋಡುತ್ತೇವೆಯೋ ಹಾಗೆಯೇ ಕಾಣಿಸುತ್ತದೆ. ಇದು ನರಮನುಷ್ಯರ ಮನಸ್ಥಿತಿ ಇಲ್ಲಿ ಯಾಕೆ ಈ ಮಾತು ಬಂತೆಂದರೆ..?

ದೇವರಿಗೆ ಹತ್ತು ಕೈಗಳು ಇರಬಹುದು, ನೂರು ಕಣ್ಣುಗಳಿರಬಹುದು, ದೊಡ್ಡ ಪ್ರಾಣಿಯಾದ ಆನೆಯ ಮುಖದ ಗಣೇಶನಿಗೆ ಸಣ್ಣ ಇಲಿ ವಾಹನವಾಗಿರಬಹುದು ನಮ್ಮದು ಯಾವುದೇ ತಕರಾರು ಇಲ್ಲ ಆದರೆ ಕೃಷ್ಣನ ಹದಿನಾರು ಸಾವಿರ ಎಂಟು ಮಂದಿ ಹೆಂಡತಿಯರ ಬಗ್ಗೆ ಏಕೆ ತಕರಾರು ನಮ್ಮ ಮನಸ್ಸಿಗೆ ಹುಟ್ಟಿದೆ.
ಶ್ರೀ ಕೃಷ್ಣನು ನಾಲ್ಕುನೂರ ಆರು ವರ್ಷಗಳು ಜೀವಿಸಿದ್ದಾನೆ. ಹದಿನಾರು ಸಾವಿರ ಎಂಟು ಜನ ಹೆಂಡತಿಯರ ಜೊತೆ ಸಂಸಾರ ಮಾಡಿದ ಕೃಷ್ಣ ಒಂದು ಲಕ್ಷ ಅರವತ್ತು ಸಾವಿರದ ಎಂಭತ್ತು ಜನ ಮಕ್ಕಳಿಗೆ ತಂದೆಯಾಗಿದ್ದಾನೆ.

ಶ್ರೀ ಕೃಷ್ಣನ ಶಿಖೆಯಲ್ಲಿ ನವಿಲುಗರಿ ಯಾಕಿರುತ್ತದೆ ಗೊತ್ತೇ..? ಕೃಷ್ಣನು ಕಾಮುಕನಲ್ಲವೆಂದು ತಿಳಿಸಲು! ಆಶ್ಚರ್ಯವಾಗುತ್ತಿದೆಯೇ. ಸೃಷ್ಟಿಯ ಪ್ರಾಣಿಕೋಟಿಗಳಲ್ಲಿ ಹೆಣ್ಣು ಗಂಡಿನ ಸಂಭೋಗವಿಲ್ಲದ ಜೀವಿಗಳೆಂದರೆ ಅದು ನವಿಲುಗಳು ಹಾಗಾಗಿ ಹದಿನಾರು ಸಾವಿರದ ಎಂಟು ಜನ ಹೆಂಡತಿಯರ ಜೊತೆ ಸಂಸಾರ ಮಾಡಿದ ಕೃಷ್ಣನು ಕಾಮುಕನಲ್ಲವೆಂದು ತಿಳಿಯಲು ತಲೆಯ ಮೇಲೆ ಗರಿಯನ್ನು ಇಟ್ಟಿದ್ದಾರೆ ನಮ್ಮ ಪೂರ್ವಜರು.
ಪರಮ ಶೃಂಗಾರ ಪುರುಷನಾಗಿ ಕಾಣಿಸುವ ಕೃಷ್ಣನು ಮಹಾಯೋಗಿ
ವಿಶುದ್ಧ ತಾತ್ವಿಕವೇತ್ತ!
ಪರಿಶುದ್ಧ ನೈಷ್ಠಿಕ ವೇದಾಂತ ಪುರುಷ!
ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ