“ರಾಮೋವಿಗ್ರಹವಾನ್ ಧರ್ಮಃ”

“ಧರ್ಮದ ಪ್ರತಿರೂಪವೇ ಶ್ರೀರಾಮನು !” ಎನ್ನುತ್ತಿವೆ ಶಾಸ್ತ್ರಗಳು ಹಾಗೂ ಹಿಂದೂಧರ್ಮವು ನಂಬುತ್ತಾ ಬಂದಿರುವುದು ಏನೆಂದರೆ ಮೂರ್ತೀಭವಿಸಿದ ಧರ್ಮವೇ ಶ್ರೀರಾಮನೆಂದು.

ಆತ್ಮಧರ್ಮಕ್ಕೂ ರಾಜಧರ್ಮಕ್ಕೂ ಮಧ್ಯೆಯಲ್ಲಿ ಸೇತುವೆ ನಿರ್ಮಿಸಿದವನು ಶ್ರೀರಾಮನು. ತಾನು ಮೇಣದಂತೆ ಕರಗಿ ನಾಶವಾಗುತ್ತಾ ಜಗತ್ತಿಗೆ ಬೆಳಕು ಚೆಲ್ಲಿದವನು ಶ್ರೀರಾಮನು. ರಾಮನನ್ನು ಹೈಂದವಧರ್ಮಪ್ರತಿನಿಧಿಯಾಗಿಯೇ ಈಗಲೂ ನಂಬುತ್ತಿದ್ದಾರೆ.

ಯಾರೇ ಆದರೂ ಸರಿ ಎಂತಹ ಶಕ್ತಿವಂತನಿಗಾದರೂ ಪರಸ್ತ್ರೀ ವ್ಯಾಮೋಹ ಸಲ್ಲದೆಂದು ರಾಮಾಯಣ ಹೇಳುತ್ತದೆ. ಅವಿವೇಕಿ ಹೆಂಗಸರಿಗೆ ವರಗಳನ್ನು ಕೊಡಬಾರದೆಂದು ಕೈಕೇಯಿಯ ಮೂಲಕ ರಾಮಾಯಣ ತಿಳಿಸುತ್ತದೆ. ಪಿತೃವಾಕ್ಯ ಪರಿಪಾಲನೆಗಿಂತಲೂ ಮಹಾತ್ಕಾರ್ಯವಿಲ್ಲವೆಂದು ಹೇಳುತ್ತದೆ ರಾಮಾಯಣ. ರಾವಣನ ಸಾವಿಗೆ ವಿಭೀಷಣನೇ ಕಾರಣ ಆದ್ದರಿಂದ ಸೋದರರು ಎಂತಹ ಕಲಹಗಳಿದ್ದರೂ ಶತ್ರುಪಕ್ಷ ಸೇರಬಾದೆಂದು ಹೇಳುತ್ತದೆ ರಾಮಾಯಣ.

ಸೋದರರ ಹೆಂಡತಿಯನ್ನು ಮೋಹಿಸಬಾರದೆಂದು (ವಾಲಿ) ಹೇಳುತ್ತಿದೆ ರಾಮಾಯಣ! ಸಹನ, ಕಾರ್ಯದೀಕ್ಷೆಯಿದ್ದರೇ ಸಮುದ್ರಕ್ಕೂ ಸಹ ಸೇತುವೆಯನ್ನು ನಿರ್ಮಿಸಬಹುದೆಂದು ಹೇಳುತ್ತಿದೆ ರಾಮಾಯಣ. ಹೀಗೆ ಈ ಮಹಾಕಾವ್ಯದಲ್ಲಿ ಅನೇಕ ನೀತಿಗಳಿದೆ ಅದನ್ನು ಮಾನವ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅವನು ಧರ್ಮದ ಪರಿಪಾಲಕನಾಗಬಲ್ಲ.

ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ