ಮಂತ್ರಗಳು ವೇದದಲ್ಲಿವೆ !
ವೇದಗಳು ಸಂಸ್ಕೃತದಲ್ಲಿದೆ !
ವೇದಗಳನ್ನು ಯಾರಾದರೂ ಕಲಿಯಬಹುದು. ವೇದಗಳನ್ನು ಕಲಿಯಲು ಜಾತಿನಿಯಮಗಳಿಲ್ಲ. ಈ ವಿಷಯ ವೇದಗಳಲ್ಲಿಯೇ ಇದೆ. ವೇದಗಳು ಒಂದು ಜಾತಿಗಾಗಿ ಒಂದು ಕುಲಕ್ಕಾಗಿ ಒಬ್ಬರಿಗಾಗಿ ಸೃಷ್ಟಿಯಾಗಿದ್ದಲ್ಲ. ವೇದ ಹಾಗೂ ವಿಜ್ಞಾನವು ಎಲ್ಲರದ್ದು! ಎಲ್ಲಾ ಮಾನವರದ್ದು!.

ಮಹಮ್ಮದೀಯರ “ಖುರಾನ್” ಗ್ರಂಥ ಅರಬ್ಬಿಕ್ ಭಾಷೆಯಲ್ಲಿದೆ.
ಕ್ರೈಸ್ತವರ “ಬೈಬಲ್” ಗ್ರಂಥ ರೋಮನ್ ಭಾಷೆಯಲ್ಲಿದೆ.
ಬೌದ್ಧಮತದ “ತ್ರಿಪೀಟಕ” ಗ್ರಂಥ ಪಾಳೀ ಭಾಷೆಯಲ್ಲಿದೆ.
ಎಲ್ಲಾ ಮತಗ್ರಂಥಗಳನ್ನು ಮನುಷ್ಯರೇ ಬರೆದಿದ್ದಾರೆ. ಆದರೆ ವೇದಗಳು ಮನುಷ್ಯರಿಂದ ರಚಿತವಾದುದಲ್ಲ ಇದು ವೇದಗಳ ವಿಶಿಷ್ಠತೆ ಪವಿತ್ರತೆಯಾಗಿದೆ.
ಸಂಸ್ಕೃತ ಭಾಷೆ ದೇವಲೋಕದ ಭಾಷೆ ಎಂಬ ನಂಬಿಕೆಯಿದೆ ಈ ಕಾರಣದಿಂದಲೇ ದೇವತಾಪೂಜೆಗೆ ಸಂಸ್ಕೃತ ಮಂತ್ರಗಳನ್ನು ಪಠಿಸುತ್ತಾರೆ. ಇದು ವಿಮರ್ಶನೀಯ ವಿಷಯವಲ್ಲ ಭಾರತೀಯ ಭಾಷೆಗಳಿಗೆ ಸಂಸ್ಕೃತವೇ ಮೂಲವಲ್ಲವೇ..?
ಮಂತ್ರಗಳನ್ನು ಸಂಸ್ಕೃತ ಭಾಷೆಯಲ್ಲಿ ಹೇಳುವುದಕ್ಕೆ ಬಹಳ ಕಾರಣಗಳಿವೆ ವೇದಗಳು ದೇವರಿಂದ ದೊರೆತಿದೆ ಎಂಬ ನಂಬಿಕೆಯಿಂದ ಈ ಮಂತ್ರಗಳನ್ನು ಸಂಸ್ಕೃತದಲ್ಲಿಯೇ ಹೇಳಬೇಕು. ವೇದಗಳಿಗೆ ಸ್ವರವಿದೆ ಸಂಗೀತವಿದೆ ನಾದವಿದೆ ಎಂದು ಹೇಳುತ್ತಾರೆ. ಸ್ವರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅರ್ಥ ಬೇರೆಯದೆ ಆಗುತ್ತದೆ. ಹಾಗಾಗಿ ಸ್ವಚ್ಛವಾದ ಸ್ವರದೊಂದಿಗೆ ನಿಮಗೆ ಮನಸ್ಸಿದ್ದರೆ ವೇದಗಳಲ್ಲಿರುವ ಮಂತ್ರಗಳನ್ನು ಸಂಸ್ಕೃತದಲ್ಲಿಯೇ ಪಠಿಸಿ
ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ