ಕುಂಕುಮ, ವಿಭೂತಿ ಇವೆರಡೂ ಸ್ತ್ರೀ ಪುರುಷರಿಬ್ಬರೂ ಧಾರಣೆ ಮಾಡುತ್ತಿದ್ದರು. ಬ್ರಹ್ಮ ದೇವನು ಜನ್ಮ ಬರಹವನ್ನು ಹಣೆಯ ಮೇಲೆ ಬರೆದಿಟ್ಟಿರುವನೆಂಬ ದೃಡ ನಂಬಿಕೆ ನಮ್ಮಲಿದೆ. ವಿಧಿಬರಹವನ್ನು ಗೌರವಿಸುವುದಕ್ಕಾಗಿಯೂ ಮತ್ತು ಎರಡು ಕಣ್ಣುಗಳು ಮಧ್ಯ ಭಾಗದಲ್ಲಿ ಮೂಗಿನ ಮೇಲ್ಭಾಗದಲ್ಲಿ “ಇಡನಾಡಿ”, “ಪಿಂಗಳನಾಡಿ”ಗಳು ಒಂದಾಗುವ ಸುಷುಮ್ನನಾಡಿ ಇದೆ. ಈ ಸುಷುಮ್ನನಾಡಿಯ ಸಹಾಸ್ರಾಕಾರ ಸ್ಥಾನವೇ ಎಲ್ಲವನ್ನೂ ಪ್ರೇರೆಪಿಸುತ್ತದೆ. ಆ ಕಾರಣದಿಂದಲೇ ಅಲ್ಲಿ ಕುಂಕುಮ ವಿಭೂತಿಗಳನ್ನಿಟ್ಟು ಗೌರವಿಸುತ್ತಾರೆ.

ಮತಾಂತರಿಗಳು ದೇಶವನ್ನು ಒಳಹೊಕ್ಕ ನಂತರ ನಿಧಾನವಾಗಿ ಪುರುಷರು ಹಾಗೂ ಸ್ತ್ರೀಯರು ಕುಂಕುಮ ವಿಭೂತಿ ಬಿಟ್ಟರು. ಹಿಂದೂ ಧರ್ಮದ ಜನ್ಮ ಸ್ಥಾನವೆಂದೇ ಹೆಸರುವಾಸಿಯಾದ ಕಾಶೀಕ್ಷೇತ್ರದಲ್ಲಿ ಅಂದಿನ ಮಹಮ್ಮದೀಯ ಮತೋನ್ಮಾದಿಗಳು 1500 ದೇವಾಲಯಗಳನ್ನು ನಾಶಪಡಿಸಿದರು. ಈ ಸಮಯದಲ್ಲೇ ಲಕ್ಷಾಂತರ ಹಿಂದೂಗಳು ಮುಸ್ಲಿಂ ಮತಕ್ಕೆ ಬಲತ್ಕಾರವಾಗಿ ಸೇರ್ಪಡೆಯಾದರು.
ಸ್ನಾನದಾನ ತಪೋಯಜ್ಞಃ ದೇವಪಿತೃಶ್ಚ ಕರ್ಮಣಿ ।
ತತ್ಸರ್ವಂ ನಿಷ್ಪಲಂ ಯಾಂತಿ ಲಲಾಟೇ ತಿಲಕಂ ವಿನಾ ॥
ಕುಂಕುಮವನ್ನು ಧರಿಸದೆ ಯಾವ ಪವಿತ್ರ ಕೆಲಸಗಳನ್ನು, ಪಿತೃಕಾರ್ಯಗಳನ್ನು ಯಾರದರೂ ಮಾಡಿದರೆ ಅದು ನಿಷ್ಪಲವಾಗುತ್ತದೆ.
ಕುಂಕುಮಧಾರಣದಿಂದ ಮನುಷ್ಯನಿಗೆ ವಶೀಕರಣ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಸೃಷ್ಟಿಯಲ್ಲಿ ಮೊದಲನೆಯ ಬಣ್ಣ ಕೆಂಪು ಅಥವಾ ಕಾವಿ ಆಗಿದೆ ಎಂದು ಹೇಳಲಾಗುತ್ತದೆ. ಕುಂಕುಮ ಧಾರಣ ಆಸ್ತಿಕತೆಗೆ ಪ್ರತೀಕವೂ ಆಗಿದೆ.
ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ