
ಬೇಕಾಗುವ ಪದಾರ್ಥಗಳು :
ಕೆಂಪುಬೆಲ್ಲ : ಅರ್ಧ ಕೆ.ಜಿ
ಗೋಧಿಹಿಟ್ಟು : 200 ಗ್ರಾಂ
ಗೆಣಸು : ಅರ್ಧ ಕೆ.ಜಿ
ಏಲಕ್ಕಿ : ಸ್ವಲ್ಪ
ಅಕ್ಕಿಹಿಟ್ಟು : ಸ್ವಲ್ಪ
ಎಣ್ಣೆ : ಬೇಕಾಗುವಷ್ಟು
ಉಪ್ಪು : ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಗೆಣಸನ್ನು ಹೋಳು ಮಾಡಿ ನೀರಿನಲ್ಲಿ ಹಾಕಿ, ಒಲೆಯ ಮೇಲೆ ಇಟ್ಟು ಕುದಿಸಬೇಕು. ಅವು ಸಂಪೂರ್ಣವಾಗಿ ಬೆಂದ ಮೇಲೆ ಇಳಿಸಬೇಕು. ಆರಿದ ಮೇಲೆ ಒರಳಲ್ಲಿ ಹಾಕಿ ರುಬ್ಬಬೇಕು. ಈ ಗೆಣಸಿನ ಮುದ್ದೆಗೆ ರುಚಿಗೆ ತಕ್ಕಷ್ಟು ಉಪ್ಪು, ತಕ್ಕಷ್ಟು ಕೆಂಪುಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ನಾದಿ ಇಡಬೇಕು ಒಂದು ಲೋಟ ಗೋಧಿಹಿಟ್ಟನ್ನು ಗಟ್ಟಿಯಾಗಿ ಕಲಸಿ, ನಾದಿ ಇಟ್ಟುಕೊಂಡಿರಬೇಕು. ಕಲಸಿದ ಹಿಟ್ಟನ್ನು ಒಂದು ಸ್ವಚ್ಛವಾದ ಪಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಇಡಬೇಕು. ಹೂರಣದ ಹೋಳಿಗೆಯನ್ನು ಮಾಡಿದಂತೆ ಈ ಗೆಣಸಿನ ಹೂರಣವನ್ನು ಹಾಕಿ ಹೋಳಿಗೆಯನ್ನು ಮಾಡಬೇಕು. ಇದರ ರುಚಿ ಹೇಳಲು ಅಸಾಧ್ಯ.