ಬೇಕಾಗುವ ಪದಾರ್ಥಗಳು:
ತೆಂಗಿನಕಾಯಿ : 2
ಸಕ್ಕರೆ : 2-3 ಲೋಟ
ಹಾಲು : 2 ಲೋಟ
ಏಲಕ್ಕಿ : 4
ತುಪ್ಪ : ಬೇಕಾಗುವಷ್ಟು

ತಯಾರಿಸುವ ವಿಧಾನ :
ತೆಂಗಿನಕಾಯಿ, ಸಕ್ಕರೆ, ಹಾಲನ್ನು ಸೇರಿಸಿ ಕುದಿಯಲು ಇಡಬೇಕು. ಕುದಿದು ಗಟ್ಟಿಯಾಗಿ, ಬಿಳಿಯ ಬಣ್ಣ ಬಂದೊಡನೆ ಏಲಕ್ಕಿ ಪುಡಿ ಹಾಕಿ, ತುಪ್ಪ ಹಚ್ಚಿದ ತಟ್ಟೆಗೆ ಹಾಕಬೇಕು. ತಣ್ಣಗಾದ ಮೇಲೆ ಚೌಕೋನಾಕೃತಿಯಾಗಿ ಕತ್ತರಿಸಬೇಕು. ಈ ರೀತಿಯಾಗಿ ಸಿಹಿಯಾದ ಕೊಬ್ಬರಿ ಬರ್ಫಿ ಮಾಡಿರಿ
ಸಂಗ್ರಹ