ಸಾವಿರಾರು ವರ್ಷಗಳಿಂದಲೂ ನಾಯಿ ಎಂಬ ಪ್ರಾಣಿ ಮನುಷ್ಯರ ‘ಗೃಹಬಂಧು’ವಾಗಿದೆ. ಈ ಕಾರಣದಿಂದಲೇ ಯಾರೂ ನಾಯಿಯ ಮಾಂಸವನ್ನು ತಿನ್ನಬಾರದೆಂದು ಹಿರಿಯರು ನಿಷೇಧವನ್ನು ವಿಧಿಸಿದ್ದಾರೆ. ನಾಯಿಯ ಬಂಧುವಾಗಿರುವ ನರಿಮಾಂಸವನ್ನೂ ತಿನ್ನಲಾಗುವುದಿಲ್ಲ.

ಪ್ರಕೃತಿಯಿಂದ ಸಂಭವಿಸುವ ಉಪದ್ರವಗಳನ್ನು ಕೆಲವು ಘಂಟೆಗಳ ಮುಂಚಿತವಾಗಿಯೇ ನಾಯಿಗಳು ಕಂಡುಹಿಡಿಯುತ್ತವೆ. ಭೂಕಂಪನಗಳು, ತೂಫಾನುಗಳು, ಸುನಾಮಿಗಳು, ಉಲ್ಕಾಪಾತಗಳು, ಸೂರ್ಯ ಚಂದ್ರ ಗ್ರಹಣಗಳು ಮುಂತಾದವುಗಳನ್ನು ನಾಯಿಗಳು ಮುಂಚಿತವಾಗಿಯೇ ಕಂಡುಹಿಡಿಯುತ್ತವೆ. 6 ಕಿ.ಮೀ ದೂರದಲ್ಲಿ ನಡೆಯುವ ವಿಷಯವನ್ನು ಇಲ್ಲಿಂದಲೇ ಪತ್ತೆ ಮಾಡುತ್ತವೆ.

ಜಾವಾದ್ವೀಪದಲ್ಲಿ ಮತ್ತು ಹಿಮಾಲಯ ಪ್ರಾಂತದಲ್ಲಿ ಇಂದಿಗೂ ನಾಯಿಯನ್ನು ದೇವತೆಗಳೆಂದು ನಂಬಿ ಪೂಜಿಸುತ್ತಾರೆ. ನಮ್ಮ ಹಿಂದೂಗಳಲ್ಲಿಯೂ ನಾಯಿಯನ್ನು ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ ಪೂಜೆ ಮಾಡುವುದನ್ನು ಗಮನಿಸಬಹುದು. ರಾತ್ರಿ ಸಮಯದಲ್ಲಿ ನಮ್ಮ ಮನೆಯ ಹತ್ತಿರ ದುಷ್ಟಗ್ರಹಗಳು ತಿರುಗಾಡುತ್ತಿದ್ದರೇ ನಾಯಿಗಳು ಕೂಗಿ ಗಲಾಟೆ ಮಾಡುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಎಂದೂ ನಾಯಿಗಳನ್ನು ಕಾಲಿನಿಂದ ಒದೆಯಬಾರದು. ಹಾಗೆ ಮಾಡಿದರೆ ಲಕ್ಷ್ಮೀ ದೂರ ಸರಿಯುತ್ತಾಳೆ. ನಾಯಿಗಳಿಗೆ ಪ್ರತಿದಿನ ಆಹಾರ ನೀಡುವವರಿಗೆ ಶನಿದೇವನು ಹತ್ತಿರಕ್ಕೆ ಬರುವುದಿಲ್ಲ . ಆದ್ದರಿಂದ ನಾಯಿಯನ್ನು ‘ಕಾಲಜ್ಞಾನಿ’ ಎಂದು ಹೇಳುತ್ತಾರೆ.

ಸಂಗ್ರಹ