ಬೇಕಾಗುವ ಪದಾರ್ಥಗಳು :

ಬದನೆಕಾಯಿ – 1/2 ಕೆ.ಜಿ
ಈರುಳ್ಳಿ – 2
ಬೆಳ್ಳುಳ್ಳಿ ಗಡ್ಡೆ – 2
ಹಸಿಮೆಣಸಿನಕಾಯಿ – 4 ರಿಂದ 5
ಎಳ್ಳು – 1 ಸೌಟು
ಶೇಂಗಾ – 1 ಸೌಟು
ಹುರಿಗಡಲೆ – ಸ್ವಲ್ಪ
ಹಸಿ ಕೊಬ್ಬರಿ ತುರಿ – 1 ಲೋಟ
ಹುಣಸೆ ಹಣ್ಣು – ಸ್ವಲ್ಪ
ಬೆಲ್ಲ – ಸ್ವಲ್ಪ
ಗುರೆಳ್ಳಪುಡಿ – ಸ್ವಲ್ಪ
ಅರಿಶಿನ ಪುಡಿ – ಸ್ವಲ್ಪ
ಮಸಾಲೆ – ಬೇಕಾಗುವಷ್ಟು
ಖಾರದ ಪುಡಿ – ಬೇಕಾಗುವಷ್ಟು
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಬದನೆಕಾಯಿ ಮೇಲಿನ ತುಂಬನ್ನು ಸ್ವಲ್ಪ ಬಿಡಿಸಬೇಕು. ಸುತ್ತಲೂ ಮುಳ್ಳು ಇದ್ದರೆ ಹೆಚ್ಚಿ ಚೆಲ್ಲಬೇಕು. ಬದನೆಕಾಯಿಯನ್ನು ನಾಲ್ಕು ಭಾಗವಾಗುವಂತೆ ಸೀಳಿ ನೀರಿನಲ್ಲಿ ಹಾಕಬೇಕು. ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಬೇಕು.

ಎಣ್ಣೆ ಒಗ್ಗರಣೆಗೆ ಇಟ್ಟು, ಅದರಲ್ಲಿ ಜೀರಿಗೆ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿಯನ್ನು ಹಾಕಬೇಕು. ಸ್ವಲ್ಪ ಬೆಂದ ಬಳಿಕ ಬೆಳ್ಳುಳ್ಳಿ ಹುಣಸೆಹಣ್ಣು, ಮಸಾಲೆಖಾರ, ಅರಿಶಿನ ಪುಡಿ, ಗುರೆಳ್ಳಪುಡಿ, ಹುರಿಗಡಲೆ, ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿ ತುರಿ ಮತ್ತು ಕೊತ್ತಂಬರಿಯನ್ನು ಹಾಕಬೇಕು. ಎಳ್ಳು, ಶೇಂಗಾ ಹುರಿದು ಹಾಕಬೇಕು. ಎಲ್ಲವನ್ನೂ ಸೇರಿಸಿ ರುಬ್ಬಬೇಕು. ಅದನ್ನು ಹೆಚ್ಚಿಟ್ಟ ಬದನೆಕಾಯಿಯಲ್ಲಿ ತುಂಬಬೇಕು. ಒಂದು ಸ್ವಚ್ಛವಾದ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಟ್ಟು ಈರುಳ್ಳಿ ಮತ್ತು ಇಂಗು ಒಗ್ಗರಣೆಗೆ ಹಾಕಬೇಕು. ಈರುಳ್ಳಿ ಬೆಂದ ಬಳಿಕ ತುಂಬಿಟ್ಟ ಬದನೆಕಾಯಿಯನ್ನು ಹಾಕಬೇಕು. ನೀರು ಹಾಕಿ ಬೇಯಿಸಬೇಕು ಅಥವಾ ಎಣ್ಣೆಯನ್ನಾದರೂ ಹಾಕಿ ಬೇಯಿಸಬೇಕು.

ಇನ್ನಷ್ಟು ಸವಿರುಚಿ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ