ಬೇಕಾಗುವ ಪದಾರ್ಥಗಳು:

ಕೋಳಿ ಮಾಂಸ – 1 ಕಿಲೋ
ಖಾರದ ಪುಡಿ -1 ಚಮಚ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ -1 ಚಮಚ
ಧನಿಯಾ ಪುಡಿ – 1 ಚಮಚ
ಮೊಟ್ಟೆ – 1
ಚಿಕನ್ ಮಸಾಲ ಪುಡಿ – 2 ಚಮಚ
ನಿಂಬೆ ಹಣ್ಣು – 2
ಕಾರ್ನ್ ಫ್ಲೋರ್ – 5 ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ – 2 ಚಮಚ
ಕೇಸರಿ ಕಲರ್ – 1/2 ಚಮಚ
ಕರಿಬೇವು – 1/2 ಕಟ್
ಎಣ್ಣೆ – 100 ಗ್ರಾಂ
ಅರಿಶಿನ ಪುಡಿ -1/2 ಚಮಚ
ಕಾಳು ಮೆಣಸಿನ ಪುಡಿ – 1/2 ಚಮಚ
ಕೊತ್ತಂಬರಿ ಸೊಪ್ಪು – 1/2 ಕಟ್
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲಿಗೆ ಕೋಳಿ ಮಾಂಸವನ್ನು ನೀರು ಹಾಕಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಅದಕ್ಕೆ ಸ್ವಲ್ಪ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಬೇಕು. ನಂತರ 1 ಗಂಟೆಯ ಕಾಲ ನೆನೆಯಲು ಬಿಡಬೇಕು.ಬಳಿಕ ಮೇಲ್ಕಂಡ ಎಲ್ಲಾ ಪದಾರ್ಥಗಳನ್ನು ಹಾಕಿ ಕಲಸಿ ಅರ್ಧ ಗಂಟೆಯ ಸಮಯ ನೆನೆಸಬೇಕು. ನಂತರ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಅದಕ್ಕೆ ಮಿಶ್ರಣ ಮಾಡಿದ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಬಳಿಕ ಸ್ಪಲ್ಪ ಕರಿಬೇವು ಹಾಗು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ಲೆಮನ್ ಚಿಕನ್ ಸವಿಯಲು ಸಿದ್ಧ.
ಇನ್ನಷ್ಟು ಸವಿರುಚಿ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ