
ಮಹಮದಾಲಿ ಜಿನ್ನಾ ಒಂದು ರೀತಿಯಲ್ಲಿ ಗೆಲುವು ಸಾಧಿಸಿದ, ಪಾಕಿಸ್ತಾನ ನಿರ್ಮಾಣವಾಯಿತು. 1947ರ ಆಗಸ್ಟ್ 15 ಬಂತು. ಬ್ರಿಟಿಷರು ಭಾರತದಿಂದ ಕಾಲ್ತೆಗೆದರು ಪಂಡಿತ್ ನೆಹ್ರು ಮೊದಲ ಭಾರತ ಪ್ರಧಾನಿಯಾದರು. ಗಾಂಧೀಜಿಯವರ ಮುಸ್ಲಿಂ ಪರ ಧೋರಣೆ ಮುಂದುವರಿದು ಅವರ ವಿಚಾರವನ್ನು ಒಪ್ಪದ ಹಲವರು ಅಶಾಂತರಾಗಿದ್ದರು. ಅವರ ಪೈಕಿ ನಥೂರಾಮ್ ಗೋಡ್ಸೆ ಎಂಬವನು 1948 ರ ಜನವರಿ 30 ರಂದು ಗಾಂಧೀಜಿಯವರ ಹತ್ಯೆ ಮಾಡಿದ. ಸಾವರ್ಕರ್ ಆ ಕೃತ್ಯದ ಮಾರ್ಗದರ್ಶಕರೆಂದು ನೆಹರು ಸರಕಾರ ಆರೋಪಿಸಿ ಅವರನ್ನು ಬಂಧಿಸಿತು. ಗೋಡ್ಸೆ 1938 – 39 ರಲ್ಲೇ ಆರೆಸ್ಸೆಸ್ ನಿಲುವನ್ನು ಒಪ್ಪದೆ ಸಿಡಿದು ಹೋಗಿ ಅವನದೇ ಮಾರ್ಗವನ್ನು ಹಿಡಿದಿದ್ದರೂ ಅವನಿಗೂ ಆರೆಸ್ಸೆಸ್ ಗೂ ಗಂಟು ಹಾಕಿ ಆರೆಸ್ಸೆಸ್ ಮೇಲೆ ನೆಹರು ಸರಕಾರ ನಿರ್ಬಂಧ ಹೇರಿತು.

ಸಾವರ್ಕರ್ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಹೇಳಿಸಲು ಪ್ರಾಸಿಕ್ಯೂಷನ್ ಪ್ರಯತ್ನಿಸಿತಾದರೂ ದೆಹಲಿ ಕೆಂಪುಕೋಟೆಯಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಆತ್ಮಚರಣ್ ಸಾವರ್ಕರ್ ರನ್ನು ಸಾಕ್ಷ್ಯಧಾರಗಳು ಇಲ್ಲದ ಕಾರಣ ನಿರಪರಾಧಿ ಎಂದು ಮುಕ್ತಿಗೊಳಿಸಿದರು. ಹಾಗೆಯೇ ಗಾಂಧೀಜಿ ಕೊಲೆಯಲ್ಲಿ ಆರೆಸ್ಸೆಸ್ ಪಾತ್ರ ಇಲ್ಲವೆಂದೂ ಅದರ ಮೇಲಿನ ನಿರ್ಬಂಧವನ್ನು ಅಸಿಂಧುಗೊಳಿಸಿದರು.
ಸಂಗ್ರಹ