ಹರಿದುಹೋಗಿದೆ ಅಂಗಿ, ಬರಿದೆನಗುವರು ನೋಡಿ।
ಇದನೀಗ ತೆಗೆದುಗೆದು, ಮುದದಿಬಾರಯ್ಯ ॥ಪ॥

ಗಾಳಿಬಿಸಿಲಿಗೆದೇಹ ಒಡ್ಡಿಬದುಕಿದರೇನು.?।
ಬಾಳುವಾಸೆಯು ಯಾಕೆ..? ಮರುಳೆ ವೋ- ಮನುಜ ॥೧॥

ಅಂತರಂಗದಿ ಕಣ್ಣು, ತೆರೆದು ನೋಡಲುಕಾಂಬೆ।
ಸಂತಸವು ಇನಿತಿಲ್ಲ, ಧರಣಿಯೊಳು ತಿಳಿಯೋ ॥೨॥

ಸತಿಸುತರು ನೋಡುವರು, ನಿನ್ನಸಿರಿ ಸಂಪದವ ।
ಮತಿಗೆಟ್ಟು ನಿನ್ನವರು ನಿನಗಿಹರು ಯೆಂದು ॥೩॥

ಯಮನಪಾಶವಕಂಡು, ಎದುರುನಿಂತಿಹೆ ಯಾಕೆ?।
ಸಮಯಮೀರಿದೆ ಪೋಗು, ನ್ಯಾಯದೇಗುಲಕೆ ॥೪॥

ಜನುಮದಾಶೆಯು ಬೇಡ, ನೆನೆಯೋ ಶ್ರೀಹರಿಯನ್ನು ।
ಮನಮಾಡು ಮುಕ್ತಿಯಿದೆ, ಈ ಆತ್ಮಕಲ್ಲೀ ॥೫॥

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.

ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ