ಧರಣಿ ದೇವಿಯೆ ಹಸಿರು ಸೀರೆಯುಡುತಲಿನಿಂತೆ।
ಪರಮಕೋಮಲೆ, ನಿನ್ನ, ಸೊಬಗ ನೋಡುತಲಿ॥

ಶಿರವಾಗುತಿಹೆತಾಯೆ ನಿನ್ನದಂಡಿಪಜನರ।
ಕರೆದುಬದ್ದಿಯಪೇಳು, ಮೌನದಿಂದಿರದೆ॥೧॥

ನೆರಳನೀಡುವವೃಕ್ಷ, ಕಡಿದುರುಳಿಸಿನಿಂತ।
ದುರುಳರನು ನೋಡವ್ವ, ಫಲಪುಷ್ಪವಿಲ್ಲ ॥೨॥

ಧರಣಿಯೊಳು ಪ್ರಾಣವಾಯುವುಕಾಣದಿರೆಬಾಳು।
ಸೊರಗಿಸಾಯುವಯೋಗ, ವಿರುವುದದುಯಿಂದೆ ॥೩॥

ಪರಿಸರವ ಉಳಿಸಯ್ಯ, ಗಿಡಮರದ ಬೆಳೆಸಯ್ಯ ।
ಉರಿಬಿಸಿಲ ಬೇಗೆಯಿಂ ನೆರಳಿನಾಶ್ರಯನೀಡಿ ॥೪॥

ಪರಮಮಂತ್ರವೆನಮ್ಮ ಸ್ವಚ್ಛತೆಯ ಜೀವನವು ।
ಪರಮಾತ್ಮ ನೊಲುಮೆಯಲಿ ನಿಜಸತ್ಯವಯ್ಯ॥೫॥

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.

ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ