ಬಾಳೆಗಿಡ ಬೀಜವಿಲ್ಲದೇ ಆಗುವಂತದ್ದು ಅಂದರೆ ಎಂಜಲು ಸ್ಪರ್ಶವಾಗದೇ ಅವುಗಳು ಮೊಳಕೆ ಬರುತ್ತವೆ. ಆದ್ದರಿಂದಲೇ ಕದಳಿಫಲವನ್ನು ದೇವರಿಗೆ ಆರ್ಪಿಸುತ್ತೇವೆ. ಭಗವಂತನಿಗೆ ಅರ್ಪಿಸುವ ಹಣ್ಣಿನ ಗಿಡದ ಎಲೆಯಲ್ಲಿ ಊಟ ಮಾಡುವುದರಿಂದ ಭಕ್ತಿಯ ಧನ್ಯತೆಯುಂಟಾಗುವುದು.

ಬಾಳೆ ಎಲೆಯಲ್ಲಿ ವಿಶಾಲವಾದ ಸ್ಥಳವಿರುವುದರಿಂದ ಅನೇಕ ಪದಾರ್ಥಗಳನ್ನು ಹಾಕಿಕೊಂಡು ಊಟ ಮಾಡಬಹುದು. ಪರಮಾತ್ಮ ಮತ್ತು ಭೂ ದೇವಿಯ ಅನುಗ್ರಹ ದೊರಕಲು ಬಾಳೆ ಎಲೆಯು ಮಾಧ್ಯಮವಾಗಿದೆ. ಇದಕ್ಕಿಂತ ಪವಿತ್ರವಾದ ವಸ್ತು ಬೇರೊಂದಿಲ್ಲ.
ಬಾಳೆ ಎಲೆಯು ಹಸಿರಾಗಿದ್ದು ಶುಭ್ರತೆ ಜಾಸ್ತಿ. ಊಟ ಮಾಡಲು ಮನಸ್ಸಿಗೆ ಹಿತ ಆಗುತ್ತದೆ. ಬಾಲೆ ಎಲೆಗೆ ತುಪ್ಪ ಅಥವಾ ಇನ್ನಿತರ ಪದಾರ್ಥಗಳಿಂದ ಬಾಳೆ ಎಲೆಯ ಆಮ್ಲೀಯ ಶಕ್ತಿಯೊಂದಿಗೆ ಸಂಯೋಜನೆ ಹೊಂದಿ ಇನ್ನಷ್ಟು ಸುವಾಸನೆ ಇರುತ್ತದೆ. ಆದ್ದರಿಂದ ಶ್ವಾಸಕೋಶಕ್ಕೂ ಪರಿಶುದ್ಧ ಗಾಳಿಯು ಹೋಗುತ್ತದೆ. ಶರೀರಕ್ಕೆ ತಗುಲುವ ಕೆಲವು ಕ್ಯಾನ್ಸರನ್ನು ಪ್ರತಿದಿನವೂ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.
ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ