
ಬೇಕಾಗುವ ಸಾಮಾಗ್ರಿಗಳು:
ಓರಿಯೊ ಬಿಸ್ಕತ್; 15
ಪಾರ್ಲೇಜಿ ಬಿಸ್ಕತ್: 15
ಸಕ್ಕರೆ : 1 ಕಪ್
ಹಾಲು : 3 ಕಪ್
ಈನೋ: 1 ಪ್ಯಾಕ್
ಗೋಡಂಬಿ : ಸ್ವಲ್ಪ
ಪಿಸ್ತ: ಸ್ವಲ್ಪ
ಬಾದಾಮಿ: ಸ್ವಲ್ಪ
ತಯಾರಿಸುವ ವಿಧಾನ:
ಮೊದಲು ಬಿಸ್ಕತ್ತು, ಸಕ್ಕರೆ (ಸಿಹಿಗೆ ತಕ್ಕಷ್ಟು) ಚೆನ್ನಾಗಿ ಹುಡಿ ಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಹಾಲು ಮತ್ತು ಹುಡಿ ಮಾಡಿದ ಬಿಸ್ಕತ್ತು ಸಕ್ಕರೆಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ, ಅದಕ್ಕೆ ಈನೋ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಅದನ್ನು ಕುಕ್ಕರ್ ನಲ್ಲಿ ನೀರು ಹಾಕಿ ಸ್ಟಾಂಡ್ ಇಟ್ಟು ಅದರ ಮೇಲೆ ಇಡಬೇಕು. ನಂತರ ಅದಕ್ಕೆ ಸ್ವಲ್ಪ ಗೋಡಂಬಿ, ಪಿಸ್ತಾ, ಹಾಗೂ ಬಾದಾಮಿ ಹಾಕಿ ವಿಶಲ್ ಹಾಕದೆ 30 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಓರಿಯೊ ಕೇಕ್ ಸಿದ್ಧವಾಗುತ್ತದೆ.
ಇನ್ನಷ್ಟು ಸವಿರುಚಿ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ