ಬೇಕಾಗುವ ಪದಾರ್ಥಗಳು :

ಖರ್ಜೂರ : ಅರ್ಧ ಕೆ.ಜಿ
ಸಕ್ಕರೆ : ಅರ್ಧ ಲೋಟ
ಗಸೆಗಸೆ : ಸ್ವಲ್ಪ
ಏಲಕ್ಕಿ : ಸ್ವಲ್ಪ
ಹುರಿಗಡಲೆ ಹಿಟ್ಟು : 1-2 ಸೌಟು
ಮೈದಾ : 2 ಲೋಟ
ರವೆ : ಅರ್ಧ ಲೋಟ
ಅಕ್ಕಿ ಹಿಟ್ಟು : ಸ್ವಲ್ಪ
ತುಪ್ಪ : ಸ್ವಲ್ಪ
ಉಪ್ಪು : ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ :

ಖರ್ಜೂರದ ಬೀಜ ತೆಗೆದು, ಸ್ವಚ್ಛಗೊಳಿಸಿಕೊಂಡು ಒರಳಲ್ಲಿ ರುಬ್ಬಬೇಕು. ಖರ್ಜೂರ ಸಣ್ಣಗಾದ ಮೇಲೆ ಹುರಿದ ಗಸೆಗಸೆ, ಏಲಕ್ಕಿ, ಸಕ್ಕರೆ, ಹುರಿಗಡಲೆ ಹಿಟ್ಟು ಹಾಕಿ ರುಬ್ಬಿ ಹೂರಣವನ್ನು ಸಿದ್ಧಗೊಳಿಸಬೇಕು. ಹೋಳಿಗೆ ಹಿಟ್ಟಿನಂತೆ ಮೇಲೆ ಹೇಳಿದ ಪ್ರಮಾಣ ಹಿಟ್ಟನ್ನು ನಾದಿ ಕಣಕವನ್ನು ಸಿದ್ಧಗೊಳಿಸಬೇಕು. ಸ್ವಲ್ಪ ದಪ್ಪ ಲಟ್ಟಿಸಿ, ಅಂಗೈ ಅಗಲ ಹೋಳಿಗೆ ಲಟ್ಟಿಸಿ ಬೇಯಿಸಬೇಕು. ಬೇಯಿಸುವಾಗ ತುಪ್ಪ ಹಚ್ಚಬೇಕು. ಈ ಹೋಳಿಗೆ 8-10 ದಿನ ಇಟ್ಟರೂ ಕೆಡುವುದಿಲ್ಲ. ಪೌಷ್ಟಿಕ ಆಹಾರ, ಖರ್ಜೂರದಲ್ಲಿ ಜೀವಸತ್ವ ಹೆಚ್ಚಾಗಿರುವುದು.

ಸಂಗ್ರಹ