ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು: 3 ಕಪ್
ಅಕ್ಕಿಹಿಟ್ಟು: 1/2 ಕಪ್
ಕೊಬ್ಬರಿ: 2
ಸಕ್ಕರೆ: 3 ಕಪ್
ಗಸಗಸೆ: 1 ಚಮಚ
ಏಲಕ್ಕಿ ಪುಡಿ: 1 ಚಮಚ
ಎಣ್ಣೆ : ಬೇಕಾಗುವಷ್ಟು
ಉಪ್ಪು: ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಮೈದಾಹಿಟ್ಟು, ಅಕ್ಕಿಹಿಟ್ಟನ್ನು ಸ್ವಲ್ಪ ಎಣ್ಣೆ ಹಾಗೂ ಉಪ್ಪು ಹಾಕಿ ಚೆನ್ನಾಗಿ ನಾದಿ ಒಂದು ಗಂಟೆ ಕಾಲ ಇಡಬೇಕು. ಕೊಬ್ಬರಿ ತುರಿ, ಸಕ್ಕರೆ, ಏಲಕ್ಕಿ,ಹುರಿದ ಗಸಗಸೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.ನಂತರ ಕಲಸಿದ ಹಿಟ್ಟನ್ನು ಚಿಕ್ಕದಾಗಿ ಲಟ್ಟಿಸಿ ಕೊಬ್ಬರಿಯ ಮಿಶ್ರಣವನ್ನು ತುಂಬಿಸಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಕರ್ಜಿಕಯಿ ತಯಾರು.

ಇನ್ನಷ್ಟು ಸವಿರುಚಿ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ