ಬೇಕಾಗುವ ಪದಾರ್ಥಗಳು;

ತೆಂಗಿನಕಾಯಿ – 1
ಬೆಲ್ಲ – 2 ಕಪ್
ಏಲಕ್ಕಿ ಪುಡಿ – 1 ಚಮಚ
ಗಸಗಸೆ – 1 ಚಮಚ
ಮೈದಾಹಿಟ್ಟು – 3 ಕಪ್
ಚಿರೋಟಿ ರವೆ – 1/2 ಕಪ್
ಅರಿಶಿನ ಪುಡಿ – 1/4 ಚಮಚ
ಎಣ್ಣೆ – ಬೇಕಾಗುವಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ;
ಮೈದಾಹಿಟ್ಟು, ರವೆ, ಚಿಟಿಕೆ ಅರಿಶಿನ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ನಾದಿ ಎರಡು ಗಂಟೆಗಳ ಕಾಲ ಬಿಡಿ. ನಂತರ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಪಾಕ ತಯಾರಿಸಿ, ತುರಿದ ತೆಂಗಿನಕಾಯಿಯನ್ನು ನೀರು ಹಾಕದೆ ರುಬ್ಬಿ ತಯಾರಿಸಿದ ಪಾಕದಲ್ಲಿ ಸೇರಿಸಿ ನಂತರ ಏಲಕ್ಕಿ ಪುಡಿ ಹಾಗೂ ಹುರಿದ ಗಸಗಸೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹೂರಣ ತಯಾರಿಸಿ, ನಂತರ ಕಲಸಿದ ಹಿಟ್ಟನ್ನು ಮೃದುವಾಗಿ ನಾದಿ ಉಂಡೆ ಮಾಡಿ ಹೂರಣ ತುಂಬಿ ತೆಳುವಾಗಿ ಲಟ್ಟಿಸಿ ಕಾದ ಹೆಂಚಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಿ
ಹೀಗೆ ಮಾಡಿದ ಹೋಳಿಗೆಯನ್ನು 5-6 ದಿನಗಳ ಕಾಲ ಇಡಬಹುದು
ಇನ್ನಷ್ಟು ಸವಿರುಚಿ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ