ಪುರಾಣಗಳ ಪ್ರಕಾರ ದೇವದಾನವರು ಸೇರಿ ಸಮುದ್ರ ಮಥನವನ್ನು ಮಾಡಿದಾಗ ಅನರ್ಘ್ಯ ಹಾಗೂ ಅಪೂರ್ವ ವಸ್ತುಗಳು ಲಭಿಸಿದವು. ಅಂತಹ ವಸ್ತುಗಳಲ್ಲಿ ಕಲ್ಪವೃಕ್ಷ, ಪಾರಿಜಾತ, ಶಮೀವೃಕ್ಷ, ತುಳಸಿ, ಅಶ್ವತ್ಥ, ಬೇವು ಮುಂತಾದ ಔಷದಿಯುಕ್ತ ಸಸ್ಯಗಳು ಸಹಾ ಲಭಿಸಿದವು. ಪಾರಿಜಾತ ಕಲ್ಪವೃಕ್ಷಗಳು ದೇವಲೋಕದ ಪಾಲಾದವು. ಶಮೀ, ಅಶ್ವತ್ಥ, ಬೇವು, ತುಳಸಿಗಳು ಭೂಲೋಕಕ್ಕೆ ಪ್ರಾಪ್ತಿಯಾಯಿತು.

ಶಮೀ – ಬನ್ನಿಮರ – ನಾವು ಬೆಳೆಸಿದರೆ ಬೆಳೆಯುವುದಿಲ್ಲ

ಅಶ್ವತ್ಥ – ಅರಳಿಮರ – ಮನೆಯ ಎದುರು ಬೆಳೆಸುವುದಿಲ್ಲ

ಬೇವು – ಬೇವಿನ ಮರ ಗೃಹಸ್ಥರಮಿತ್ರ ಮನೆಯ ಮುಂದೆ ಮನೆಯ ಹಿಂದೆ ಬಯಲಲ್ಲಿ ಹೊಲದಲ್ಲಿ ಬೆಳೆಯುವ ಬೆಳೆಸುವ ಮರವಾಗಿದೆ.

ತುಳಸಿ – ಸಾಧಾರಣ ಗಾತ್ರವನ್ನು ಹೊಂದಿರುತ್ತದೆ. ಮನೆಯ ಮುಂದೆ ಬೆಳೆಸುವ ಗಿಡವಾಗಿದೆ.

ಮನೆಯ ಮುಂದೆ ತುಳಸಿಯನ್ನು ಬೆಳೆಸುವುದರಿಂದ ತುಂಬಾ ಉಪಯೋಗವಿದೆ. ತುಳಸಿ ಔಷದಿಯುಕ್ತವಾಗಿದೆ. ಆಯುರ್ವೇದ ಶಾಸ್ತ್ರದಲ್ಲಿ ತುಳಸಿಯನ್ನು ಅಮೃತಮಯ ದೈವಮರವೆಂದೇ ತಿಳಿಸಿದೆ. ಕೆಮ್ಮು ನೆಗಡಿ ಜ್ವರ ಚರ್ಮರೋಗ ಅಸ್ತಮಾ ಗಂಟಲು ನೋವು ಮುಂತಾದ ಅನೇಕ ರೋಗಗಳ ದಿವ್ಯ ಔಷಧವಾಗಿದೆ.

ತುಳಸಿ ಎಲೆಗಳನ್ನು ನೀರಲ್ಲಿ ಹಾಕಿ ಕುಡಿಯುತ್ತಿದ್ದರೆ ಕಫ ಸಮಸ್ಯೆ ನಾಯಿಕೆಮ್ಮು ಬಿ.ಪಿ ರಕ್ತ ದೋಷಗಳು ಸ್ತ್ರೀಯರ ಋತು ಸಮಸ್ಯೆಗಳು ನಿವಾರಣೆಯಾಗುತ್ತವೆ.

ಪ್ರತಿದಿನವೂ ತುಳಸಿ ಪ್ರದಕ್ಷಿಣೆ ಮಾಡುವವರಿಗೆ ಆರೋಗ್ಯ ಆಯುಷ್ಯ ಮತ್ತು ಪ್ರತಿ ಅನುರಾಗ ಲಭಿಸುತ್ತದೆ ಎಂಬ ನಂಬಿಕೆಯಿದೆ. ತುಳಸಿ ಎಲೆಗಳನ್ನು ರಾಮ ಕೃಷ್ಣ ಸತ್ಯ ನಾರಾಯಣ ವೆಂಕಟೇಶ್ವರ ದೇವರುಗಳಿಗೆ ಸಮರ್ಪಿಸಿದರೆ ಅಭೀಷ್ಟಸಿದ್ಧಿಯಾಗುವುದೆಂದು ಹೇಳುತ್ತಾರೆ.

ನಾವೆಲ್ಲ ಜಾತಿ ಮತ ಬೇಧ ಮರೆತು ತುಳಸಿಯನ್ನು ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳೋಣ.

ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ