ಅದೊಂದು ತಿರುಚಿದ ಇತಿಹಾಸ ಎನ್ನಬಹುದೇ ಅಥವಾ ಅರ್ಧ ಸತ್ಯ ಎಂದು ಅರ್ಥೈಸಿಕೊಳ್ಳುಬಹುದೆ..? 16 ನೇ ಶತಮಾನದ ಅಂತಿಮ ಭಾಗ, ಇಡಿ ಪ್ರಪಂಚದಲ್ಲಿ ಅತ್ಯಂತ ಶಕ್ತಿವಂತ, ಅತ್ಯಂತ ಸಂಪತದ್ಭರಿತ ಸಾಮ್ರಾಟ ಎಂದು ಕರೆಸಿಕೊಂಡವ ಅಬುಲ್-ಫತ್ ಜಲಾಲ್- ಉದ್- ದೀನ್ ಮುಹಮ್ಮದ್ ಅಕ್ಬರ್. ಇಂತಹ ಪರಾಕ್ರಮಿಯನ್ನು ಮಿಕ್ಕ ರಜಪೂತರಂತೆ ಅಕ್ಬರನಿಗೆ ಡೊಗ್ಗು ಸಲಾಮ್ ಹೊಡೆಯದ ಏಕೈಕ ವೀರನೆಂದರೆ ಮಹಾರಾಣಾ ಪ್ರತಾಪಸಿಂಹ.
ರಾಣಾ ಪ್ರತಾಪನದು ಸಿಸೋದಿಯ ವಂಶ ಈ ವಂಶ ಕೆಚ್ಚೆದೆಯ ಕಲಿಗಳಿಗೆ ಪ್ರಸಿದ್ಧಿ. ಸಿಸೋದಿಯ ವಂಶದ ಒಂದು ಮಹಾಚೇತನ ರಾಣಾ ಸಾಂಗಾ ಅಥವಾ ರಾಣಾ ಸಂಗ್ರಾಮ ಸಿಂಹ. ಹತ್ತಾರು ಯುದ್ಧಗಳಲ್ಲಿ ತಾನೇ ಪಾಲ್ಗೊಂಡು ಹೋರಾಡಿದ ವೀರ ರಣರಂಗದಲ್ಲಿ ಒಂದು ಕೈ ಒಂದು ಕಾಲು ಕಳೆದುಕೊಂಡ ದೇಹದಲ್ಲಿ ಎಂಭತ್ತು ಗಾಯಗಳಾಗಿದ್ದವಂತೆ! ಆದರೂ ಅಂಜದೆ ಕುದೆರೆಯ ವಿರುದ್ಧ ಸೆಟೆದು ನಿಂತು ವಿದೇಶಿ ವಿಧರ್ಮೀ ಶತ್ರುಗಳೊಂದಿಗೆ ಹೋರಾಡಿದ ಪ್ರಚಂಡ ವೀರನ ವಂಶದಲ್ಲಿ ಹುಟ್ಟಿದವನೆ ಮಹಾರಾಣಾ ಪ್ರತಾಪಸಿಂಹ.

ರಾಣಾ ಪ್ರತಾಪಸಿಂಹ (ಕ್ರಿ.ಶ 1540 – 1597) ಇವನ ತಂದೆ ಎರಡನೆಯ ಉದಯ ಸಿಂಹ ತಾಯಿ ಜಯವಂತ ಬಾಯಿ. ಅತೀ ನ್ಯಾಯಬದ್ಧಯುತವಾದ ಆಡಳಿತ ನಡೆಸಿದ್ದನು. ಅಕ್ಬರ್ ಸಿಂಹಾಸನವನ್ನೇರಿದನಂತರ ಒಂದೊಂದಾಗಿ ರಜಪೂತ ಸಂಸ್ಥಾನವನ್ನು ಕಬಳಿಸಿದರೂ ಪ್ರತಾಪಸಿಂಹನು ಮೇವಾಡದ ದೊರೆಯಾದ ಮೇಲೆ ಮೇವಾಡ ಅಕ್ಬರನ ಪಾಲಿಗೆ ಕಗ್ಗಂಟಾಯಿತು. ಅವನು ಅದನ್ನು ವಶಪಡಿಸಿಕೊಳ್ಳಲು ಮಾಡದೇ ಬಿಟ್ಟ ಪ್ರಯತ್ನವಿರಲಿಲ್ಲ.
ಇತಿಹಾಸ ತಜ್ಞರ ಪ್ರಕಾರ ಅಕ್ಬರ್ ನ ಅಜ್ಞೆಯ ಮೇರೆಗೆ ಪ್ರತಾಪಸಿಂಹ ಸಂಬಂಧಿ ಮಾನಸಿಂಗ್ ಹಾಗೂ ಪ್ರತಾಪಸಿಂಹನ ನಡುವೆ ಘೋರ ಯುದ್ಧ ನಡೆದು ಅದರಲ್ಲಿ ಮಾನ್ ಸಿಂಗ್ ಸೋಲನ್ನು ಅನುಭವಿಸುತ್ತಾನೆ.ಈ ಯುದ್ಧವನ್ನು ಹಲ್ದಿಘಾಟಿ ಯುದ್ಧ ಎಂದು ಕರೆಯಲಾಯಿತು. ಕೊನೆಯವರೆಗೂ ಮೇವಾಡವನ್ನು ಪ್ರತಾಪಸಿಂಹನಿಂದ ಕಸಿದುಕೊಳ್ಳಲು ಅಕ್ಬರನು ವಿಫಲವಾದನು.
ಇನ್ನಷ್ಟು ಇತಿಹಾಸ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ