ಅವನೊಬ್ಬ ಕವಿ, ಅವನೊಬ್ಬ ಲೇಖನ ಮಾತ್ರ ಅಲ್ಲ, ಅವನೊಬ್ಬ ಶ್ರೇಷ್ಠ ದೇಶಭಕ್ತ. ಸ್ವಾತಂತ್ರ್ಯ ಹೋರಾಟದ ಕಲಿ. ಕೋಟಿ ಕೋಟಿ ಯುವಜನರನ್ನು ತನ್ನ ಬರಹಗಳಿಂದ ವಾಣಿಯಿಂದ ದೇಶಭಕ್ತರನ್ನಾಗಿ ತಿದ್ದಿ ತೀಡಿದ ದ್ರಷ್ಟಾರ. ಸಮಾಜ ಸುಧಾರಕ. ಭಾಷಾತಜ್ಞ, ಚಿಂತಕ. ಎಲ್ಲಕ್ಕೂ ಮಿಗಿಲಾಗಿ ಶತ್ರು ಸರ್ಕಾರದಿಂದ ಐವತ್ತು ವರ್ಷಗಳ ಕಾಲದ ಜೀವಾವಧಿ ಸೆರೆಮನೆವಾಸದ ಶಿಕ್ಷೆಗೆ ಗುರಿಯಾದ ಏಕೈಕ ಭಾರತೀಯ ಯೋಧ.
ಅವರೇ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್

ವಿನಾಯಕರು 1883ರ ಮೇ 28ರಂದು ರಾಧಾಬಾಯಿ ಸಾವರ್ಕರ್ ದಂಪತಿಗೆ ಮಹಾರಾಷ್ಟ್ರದ ನಾಸಿಕದ ಬಳಿಯ ಭಗೂರು ಎಂಬಲ್ಲಿ ಜನಿಸಿದರು.
ಸಾವರ್ಕರ್ ದಂಪತಿಗೆ ಒಟ್ಟು ನಾಲ್ವರು ಮಕ್ಕಳು ಮೂರು ಗಂಡು ಒಂದು ಹೆಣ್ಣು. ಅಣ್ಣ ಗಣೇಶ, ತಮ್ಮ ನಾರಾಯಣ ಹಾಗೂ ಸೋದರಿ ಮೈನಾ. ಗಣೇಶನನ್ನು ಎಲ್ಲರೂ ಪ್ರೀತಿಯಿಂದ ಬಾಬಾ ಎಂದು ಕರೆಯುತ್ತಿದ್ದರೆ, ವಿನಾಯಕನನ್ನು ತಾತ್ಯಾ ಎಂದು ಸಂಬೋಧಿಸುತ್ತಿದ್ದರು.
1897 ರಲ್ಲಿ ಚಾಪೇಕರ್ ಸೋದರರು ದುಷ್ಟ ಪ್ಲೇಗ್ ಕಮೀಷನರ್ ನನ್ನು ಸಂಹರಿಸಿ ದೇಶ ವಿದೇಶಗಳಲ್ಲಿ ಸಂಚಲನ ಉಂಟು ಮಾಡಿದ್ದಾಗ ಹದಿನಾಲ್ಕು ವರ್ಷದ ವಿನಾಯಕ ಅದರಿಂದ ಉದ್ವಿಗ್ನನಾಗಿ ಅವರ ಕುಲದೇವಿ ಅಷ್ಟಭುಜೆ ದುರ್ಗಾದೇವಿಯ ಮೂರ್ತಿಯ ಮುಂದೆ ಕುಳಿತು ತನ್ನ ಜೀವನವನ್ನು ದೇಶದ ಸ್ವಾತಂತ್ರ್ಯ ಸಾಧನೆಯ ಸಲುವಾಗಿ ಮುಡಿಪಿಡುವ ಪ್ರತಿಜ್ಞೆ ಕೈಗೊಂಡರು.
ಕೇವಲ ಹನ್ನೆರಡು ವರ್ಷದವನಾಗಿದ್ದಾಗಲೇ, ಅವನ ಹಳ್ಳಿಯ ಮೇಲೆ ಅನ್ಯ ಕೋಮಿನ ಪುಂಡರ ಒಂದು ಗುಂಪು ಲೂಟಿ ಮಾಡಲು ಬಂದಾಗ ತನ್ನ ಸಮಾನ ವಯಸ್ಕ ಗೆಳೆಯರ ಗುಂಪು ಕಟ್ಟಿಕೊಂಡು ಅವರನ್ನು ಓಡಿಸಿದ ಧೀರ ಈತ. ನಾಸಿಕ್ ಗೆ ಬಂದ ಮೇಲೆ ಅಲ್ಲೊಂದು ಗೆಳೆಯರ ಬಳಗವನ್ನು ಹುಟ್ಟು ಹಾಕಿ ಅದಕ್ಕೆ “ಮಿತ್ರ ಮೇಳ” ಎಂಬ ನಾಮಕರಣ ಮಾಡಿ ಅವರಿಗೆಲ್ಲ ಸ್ವಾತಂತ್ರ್ಯ ಹೋರಾಟದ ದೀಕ್ಷೆ ನೀಡಿದ.
ಹಿಂದುತ್ವ ಎಂಬ ಪರಿಕಲ್ಪನೆಯನ್ನು ಈ ವಿಷಯವಾಗಿ ಅಂಡಮಾನ್ ಜೈಲಿನಲ್ಲಿದ್ದಾಗಲೇ ಅವರು ಪ್ರಸ್ತುತಪಡಿಸಿ ಒಂದು ಸಿದ್ಧಾಂತವನ್ನೇ ರಚಿಸಿದರು. ಅದನ್ನು ರಹಸ್ಯವಾಗಿ ಲಿಪಿಬದ್ಧಗೊಳಿಸಿದ ಅನಂತರ ಅಂಡಮಾನ್ ಜೈಲಿನಲ್ಲಿ ಹೊರಕ್ಕೆ ಗುಪ್ತವಾಗಿ ಸಾಗಿಸಿ ಮರಾಠಾ ಎಂಬ ಗುಪ್ತನಾಮದಲ್ಲಿ ಪ್ರಕಟಿಸಿದರು.
ಭಗತ್ ಸಿಂಗ್ ನ ಹೋರಾಟಕ್ಕೆ ಮೂಲ ಪ್ರೇರಣೆ ಸಾವರ್ಕರ್ ಮತ್ತು ಅವರ ಕೃತಿಗಳು ಆಗಿದ್ದವು. 1966ರ ಫೆಬ್ರವರಿ 26ರಂದು ಅವರು ಕೊನೆಯುಸಿರೆಳೆದಾಗ ಅವರ ವಯಸ್ಸು ಎಂಬತ್ತಮೂರು. ಸ್ವಾತಂತ್ರ್ಯ ಹೋರಾಟಕ್ಕೆ, ಹಿಂದೂ ಪುನರುತ್ಥಾನಕ್ಕೆ ಅತ್ಯಪೂರ್ವ ಕೊಡುಗೆ ನೀಡಿದ್ದ ಮಹಾನ್ ಚೇತನ ಒಂದು ಸಂಕಲ್ಪ ಮಾತ್ರದಿಂದ ತನ್ನ ಜೀವನಯಾತ್ರೆಗೆ ಅಂತ್ಯ ಹಾಡಿತ್ತು.
ಇನ್ನಷ್ಟು ಇತಿಹಾಸ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ