ಜುಲೈ 7, 2020 ವಾಷಿಂಗ್ಟನ್ ಓದಿ [ಯುಎಸ್] : ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೋಮವಾರ ಶ್ವೇತ ಭವನದಲ್ಲಿ ಮಾತನಾಡಿ “ಟಿಕ್‌ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಯೋಚನೆ ಮಾಡಿದೆ. ಎಂದು ತಿಳಿಸಿದರು.
ಜನರು ನಿಮ್ಮ ಖಾಸಗಿ ಮಾಹಿತಿಯನ್ನು ಚೀನೀ ಕಮ್ಯುನಿಸ್ಟ್ ಪಕ್ಷದ ಕೈಯಲ್ಲಿ ಇಡಲು ಬಯಸಿದರೆ ಮಾತ್ರ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಫ಼ಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಅವರು ಹೇಳಿದ್ದಾರೆ ಎಂದು ಸಿ ಎನ್ ಎನ್ ಉಲ್ಲೇಖಿಸಿದೆ.
ಬೀಜಿಂಗ್ ಮೂಲದ ಸ್ಟಾರ್ಟ್ಅಪ್ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ಚೀನಾದೊಂದಿಗಿನ ಸಂಬಂಧದಿಂದಾಗಿ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಯುಎಸ್ ನ ರಾಜಕಾರಣಿಗಳು ಪದೇ ಪದೇ ಟೀಕಿಸಿದ್ದಾರೆ. ಇತ್ತೀಚೆಗೆ, ಚೀನಾ ಸೈನ್ಯದ ಹಿಂಸಾತ್ಮಕ ನಡೆಯ ಹಿನ್ನೆಲೆಯಲ್ಲಿ ಹಾಗೂ ದೇಶದ ಭದ್ರತಾ ದೃಷ್ಟಿಯಿಂದ ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ಭಾರತ ನಿಷೇಧಿಸಿತ್ತು. ಈ ಕ್ರಮವನ್ನು ಅಮೆರಿಕದ ಅಧಿಕಾರಿಗಳು ಶ್ಲಾಘಿಸಿದ್ದರು.