ಕುಲ್ಗಮ್ (ಜಮ್ಮು ಮತ್ತು ಕಾಶ್ಮೀರ) ಜುಲೈ 4 : “ಇನ್ನೋರ್ವ ಅಪರಿಚಿತ ಭಯೋತ್ಪಾದಕನನ್ನು ಕೊಲ್ಲಲಾಯಿತು. ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಕಾಶ್ಮೀರ ಪೊಲೀಸ್ ಪಡೆ ತಿಳಿಸಿದ್ದಾರೆ. ಇಂದು ಮುಂಜಾನೆ, ಎನ್ಕೌಂಟರ್ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿತ್ತು. ಗುಂಡಿನ ದಾಳಿ ನಿಲ್ಲಿಸಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಂಟಿ ಪಡೆಗಳು ಎರಡೂ ಭಯೋತ್ಪಾದಕರ ಮೃತ ದೇಹಗಳನ್ನು ವಶಪಡಿಸಿಕೊಂಡಿದೆ.