“ಅನ್ನಂ ಪರಬ್ರಹ್ಮ ಸ್ವರೂಪಂ”

ಎಂದು ಕೈಮುಗಿದು ಊಟ ಮಾಡುವ ಪದ್ಧತಿ ನಮ್ಮಲ್ಲಿ ಇದೆ. ಅಂದರೆ ಅನ್ನವನ್ನು ಪರಬ್ರಹ್ಮ ಸ್ಸರೂಪ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ಈಗಿನ ಕಾಲದ ಮಕ್ಕಳು ತಾಯಂದಿರಲ್ಲಿ ನಾವೇಕೆ ಕೈ ಕಾಲು ತೊಳೆಯಬೇಕು ನಾವು ಚಮಚದಲ್ಲಿ ಊಟ ಮಾಡಬಹುದಲ್ಲವೇ ಎಂದು ಪ್ರಶ್ನೆಗಳನ್ನು ಕೇಳುವ ಮಟ್ಟಿಗೆ ಬಂದು ನಿಂತಿದ್ದಾರೆ ಆಗ ತಾಯಿ ಸಿಟ್ಟಿನಿಂದ ಹೇಳಿದಷ್ಟು ಮಾಡು ಹುಚ್ಚು ಪ್ರಶ್ನೆ ಕೇಳಬೇಡ ಎಂದು ಜಬರದಸ್ತಿನಲ್ಲಿ ಹೇಳಿದರೆ ಮಕ್ಕಳಲ್ಲಿ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ನಂತರ ಇದು ಮೂಢನಂಬಿಕೆಯಾಗಿ ಪರಿವರ್ತನೆಯಾಗುತ್ತದೆ. ಮಕ್ಕಳಿಗೆ ನಾವು ಶಾಂತ ರೀತಿಯಲ್ಲಿ ಉತ್ತರಿಸಿದಲ್ಲಿ ಅವರು ಸಂಸ್ಕಾರವಂತರಾಗಿ ಬುದ್ದಿವಂತರಾಗುತ್ತಾರೆ.

ಹಿಂದಿನ ಕಾಲದಲ್ಲಿ ಭೋಜನ ಕೊಠಡಿಯನ್ನು ಹಾಗೂ ಮನೆಯ ಅಂಗಳದಲ್ಲಿ ಗೋಮಯ ಸಾರಿಸಿ ಶುದ್ಧಗೊಳಿಸುತ್ತಿದ್ದರು ಮತ್ತು ಸುಣ್ಣದಿಂದ ರಂಗೋಲಿ ಬಿಡಿಸುತ್ತಿದ್ದರು. ಈ ಕ್ರಿಯೆಯಿಂದ ಸೂಕ್ಷ್ಮ ಕ್ರಿಮಿಗಳು ನಾಶವಾಗುತ್ತಿತ್ತು.

ನಾವು ಹೊರಗಡೆ ತಿರುಗಿ ಬರುತ್ತೇವೆ ನಾವು ನಡೆಯುವಾಗ ಅಶುದ್ಧ ಪದಾರ್ಥಗಳನ್ನು ನಮಗೆ ಅರಿವಾಗದಂತೆಯೇ ತುಳಿಯುವುದು ಸಹಜ ಅಥವಾ ನಮಗೆ ತಿಳಿದೊ ತಿಳಿಯದೆಯೋ ಸ್ಪರ್ಶಿಸುವುದು ಸಹಜ. ಅದೇ ಸ್ಥಿತಿಯಲ್ಲಿ ಮನೆಯ ಒಳಗೆ ಕೈ ಕಾಲು ತೊಳೆಯದೆ ಒಳಗೆ ಬಂದರೆ ರೋಗಕಾರಕ ಕ್ರಿಮಿಗಳು ಮನೆಯವರೆಲ್ಲರನ್ನೂ ಕಾಡುತ್ತವೆ. ಚಿಕ್ಕಮಕ್ಕಳಿಗೆ ವಾಂತಿ ಬೇಧಿಗಳಾಗುವ ಶುರುವಾಗಬಹುದು. ಆದ್ದರಿಂದ ಮನೆಯ ಒಳಗೆ ಬರುವಾಗ ಹಾಗೂ ಊಟಕ್ಕೂ ಮುನ್ನ ಕೈ ಕಾಲುಗಳನ್ನು ತೊಳೆಯುವುದು ಉತ್ತಮ.

ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ