ಬುದ್ದಿಜೀವಿಗಳು ಮೇಧೋನ್ನತರು ಪಂಡಿತರು ಧರ್ಮಕೋವಿದರು ಕುಲಹಿರಿಯರು ಯೋಚಿಸಿ ತರ್ಕಿಸಿ ಮಾನವನನ್ನು ಮಹೋನ್ನತನನ್ನಾಗಿ ಮಾಡಲಿಕ್ಕೆ, ದುರಾಚಾರದಿಂದ ದೂರ ಮಾಡಲಿಕ್ಕೆ, ‘ ಆಚಾರ’ವೆಂಬ ಸಂಸ್ಕಾರ ಪದ್ಧತಿಯನ್ನು ಹಿಂದೂಮತದಲ್ಲಿ ಪ್ರವೇಶ ಮಾಡಿಸಿದ್ದಾರೆ.

ಯಾವ ಉದ್ದೇಶಕ್ಕಾಗಿ ಈ ಆಚಾರವನ್ನು ಹಿರಿಯರು ಪ್ರವೇಶ ಮಾಡಿಸಿದರೋ ಅದು ಸಫಲವಾಗಲಿಲ್ಲ. ಕಾಲಗಮನದಲ್ಲಿ ಆಚಾರಗಳು ವಿಕೃತರೂಪ ತಾಳಿಕೊಂಡವು. ಆಚಾರದ ನೆರಳಲ್ಲಿ ದುರಾಚಾರಗಳು ಹುಟ್ಟಿಕೊಂಡವು.
ತ್ತೇತಾಯುಗದಲ್ಲಿ ರಾಮನಕಾಲದಲ್ಲಿ ಧರ್ಮವು ಮಾತ್ರ ಇದ್ದವು ಈಗಿನ ಆಚಾರಗಳು ಇರಲಿಲ್ಲ. ಮದ್ಯಪಾನ ಧೂಮಪಾನಗಳು ಆ ಕಾಲದಲ್ಲೆ ಇದ್ದ ಉದಾಹರಣೆಗಳಿವೆ.
ಮೂರು ವಿದದ ಆಚಾರಗಳು ಸದಚಾರ – ನಿಯತಾಚಾರ – ಗಣಾಚಾರ
ಹಿಂದುಗಳು ವಿವಿಧ ಪಂಗಡಗಳಾಗಿ ಸಾವಿರಾರು ಜಾತಿಗಳಾಗಿ ಚೂರುಚೂರಾಗಿ ಬೇರ್ಪಡಿಸಿದ ನಂತರ ಒಂದೊಂದು ಜಾತಿಗೆ ಒಬ್ಬೊಬ್ಬ ಕುಲಗುರು ಹುಟ್ಟಿಕೊಂಡು ಹುಚ್ಚಾಚಾರಗಳನ್ನು ಕಲ್ಪಿಸಿದ್ದಾರೆ.
ಆಚರಣೀಯವಾದ ಧರ್ಮವನ್ನು ಆಚಾರ ಎಂದು ಕರೆಯಲಾಗುತ್ತದೆ.
ಶುಚಿಯೇ ಆಚಾರ! ಅಶುಚಿಯೇ ಅನಾಚಾರ!