ಏಕಚಕ್ರದರಥದಿ, ಏಳುಕುದುರೆಯಕಟ್ಟಿ ।
ಏಕಪಥದಲಿಸಾಗುತಿರುವ, ದಿನಮಣಿಯೆ ॥
ಲೋಕದೊಳು ಕರ್ತವ್ಯಕಾದರ್ಶ ನೀನಾದೆ ।
ಏಕೆ ಈ ಏಳುವರ್ಣದಿ ಕೂಡಿ ನಲಿದೆ ॥೧॥

ಅರುಣಸಾರಥಿಯಾದ, ಏಳುಗ್ರಹಗಳು ಸೇರಿ ।
ಎರಡುವಾಯುವ್ಯಕಾಯಗಳಲ್ಲಿ, ತಿರುಗೇ ॥
ಧರಣಿಯೊಳು ಜನಮನವ ಎಚ್ಚರಿಸಿ ಮುನ್ನಡೆವೆ ।
ಇರುಳು ಹಗಲೆಂದೆನುವ, ನೇಮವ ಸಾರಿ ॥೨॥

ಶನಿಶುಕ್ರ ಗುರುಕುಜರು ಬುಧಚಂದ್ರರಾಹುಗಳು ।
ನಿನಗಿರುವ ನವಶಕ್ತಿ ನಭದಿನಾನರಿತೇ॥
ಎನಗೇಕೆ.? ಭೂಮಿಯೊಳು, ಕೊರಗುವಂತಹಚಿಂತೆ ।
ದಿನಮಣಿಯೆ ಸೇರಿಸ್ಯೆ, ನಿನ್ನಲ್ಲಿ ಹೊಳೆಯೆ ॥೩॥

ಇದು ಲೇಖಕ, ಜ್ಯೋತಿಷ್ಯ ಜ್ಞಾನರತ್ನ, ಯಕ್ಷಗಾನ ಸಾಹಿತಿ ದಿವಂಗತ ಕೆ ಅನಂತರಾಮ ಬಂಗಾಡಿ ಯವರು ಬರೆದ “ಪಂಚಗವ್ಯ” ಎಂಬ ಕವಿತಾ ಸಂಕಲನದಿಂದ ಆಯ್ದ ಸಾಲುಗಳು.

ಇನ್ನಷ್ಟು ಕವನಗಳನ್ನು ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ