ನಿಮಗೊಂದು ಕಥೆಯೊಂದನ್ನು ಹೇಳಲು ಬಯಸುತ್ತೇನೆ “The Camel and the Tent ” ಒಂದು ಒಂಟೆ ಮತ್ತು ಒಂದು ಡೇರೆಯ ಕಥೆ. ಒಬ್ಬ ಒಂದು ಮರಭೂಮಿಯಲ್ಲಿ ಛಳಿ ತಡೆಯಲು ಒಂದು ಡೇರೆ ಹಾಕಿಕೊಂಡು ಮಲಗಿದ್ದ. ಅವನ ಜೊತೆ ಅವನ ವಾಹನ ಒಂಟೆಯೂ ಅಲ್ಲೇ ಹೊರಗಡೆ ಮಲಗಿತ್ತು.
ಚಳಿಗಾಲದ ಚಳಿಯಲ್ಲಿ ನಡುಗುತ್ತಾ ಒಂಟೆ ಯಾಜಮಾನನಲ್ಲಿ ” ಚಳಿ ತಡೆಯಲಾರೆ ನನ್ನ ಮೂತಿಯನ್ನು ಡೇರೆಯ ಒಳಗಿಟ್ಟು ಮಲಗಲು ಅವಕಾಶ ಕೊಡು” ಎಂದು ಕೇಳಿಕೊಂಡಿತು ಯಾಜಮಾನನು ಹೂಂ ಅಂದ. ನಂತರ ಸ್ವಲ್ಪ ಹೊತ್ತು ಬಿಟ್ಟು ಕೊರಳೂ ಚಳಿಯಿಂದ ಸಾಯುತ್ತಿದೆ ಒಳಗೆ ತಂದುಕೊಳ್ಳಲೇ” ಎಂದಿತು ಅದಕ್ಕೂ ಯಾಜಮಾನನು ತಲೆ ಅಲ್ಲಾಡಿಸಿದನು.
ಹೀಗೆ ಜಾಗ ಕೇಳುತ್ತಾ ಕ್ರಮೇಣ ಮುಂಗಾಲೆರಡು, ಹೊಟ್ಟೆ, ಹಿಂಗಾಲು, ಬಾಲ ಎಲ್ಲ ಚಳಿಗೆ ಬಂದ ಮೇಲೆ “ಈ ಡೇರೆಯೇ ನನ್ನದು. ನೀನೆ ಹೊರಗೆ ಹೋಗು” ಎಂದು ಜಬರಿಸಿತ್ತು. ಕೋಪಗೊಂಡ ಯಜಮಾನ ಒಂಟೆಯನ್ನೇ ಹೊಡೆದು ಸಾಯಿಸಿದ. ಇದು ಅರಬ್ಬರದೇ ಕಥೆ..

ಈ ಕಥೆ ಯಾಕೆ ನಿಮ್ಮ ಮುಂದೆ ಇಡಲಾಗಿದೆ ಎಂದರೆ ನಮ್ಮ ದೇಶದಲ್ಲಿ ವ್ಯಾಪಾರ ಮಾಡಲು ಬಂದವರು ದೇಶವನ್ನೇ ನುಂಗಿ ನೀರು ಕುಡಿದರು. ಇನ್ನೂ ಕೆಲವರು ಧರ್ಮ ಬೋಧನೆಯ ಹೆಸರಿನಲ್ಲಿ ” ನಮ್ಮ ಧರ್ಮಕ್ಕೆ ಮತಾಂತರವಾಗಬೇಕು ಇಲ್ಲವೇ ನಮ್ಮ ಜಾತಿಯವರಲ್ಲದವರ ಬಹಿಷ್ಕರಣ, ದೇಶ ಶುದ್ಧೀಕರಣ ಎಂಬ ಹಿಂಸಾರೂಪದ ತತ್ವಗಳನ್ನು ಇಟ್ಟು ಕೊಂಡು ಮಾರಣಹೋಮವೇ ನಡೆಯಿತು. ಈಗಲೂ ಅಲ್ಲಲ್ಲಿ ನಡೆಯುತಿದೆ ಕಾರಣ ಆಗಿನ ಕಾಲದಲ್ಲಿ ಬಿತ್ತಿದ ವಿಷ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ.
ಬ್ರಿಟಿಷರಿಗೆ ಜಾರ್ಜ್ ಟೌನ್ ಎಂಬ ಇಂದಿನ ಚೆನ್ನೈ ನಗರದಲ್ಲಿ ಸಮುದ್ರ ತೀರದಲ್ಲಿ ಅಂದು ವಾಸಿಸಲು ವ್ಯಾಪಾರ ಮಳಿಗೆ ಕೋಠಿ ಕಟ್ಟಿಕೊಳ್ಳಲು ಜಾಗ ಕೊಡಲಾಯಿತು. ಕಲ್ಕತ್ತಾ ಕೊಚ್ಚಿನ್ ಗೋವಾ ದಾಮನ್ ಚಂದ್ರನಾಗೂರ್ ಪಾಂಡಿಚೆರಿ ಇತ್ಯಾದಿ ಕಡೆಗಳಲ್ಲಿ ಉದಾರವಾಗಿ ಜಾಗ ಕೊಟ್ಟು ಆಪತ್ತನ್ನು ನಾವು ನಮ್ಮ ಮೈಮೇಲೆ ಹಾಕಿಕೊಂಡೆವು.

ಆಕ್ರಮಣಶೀಲ ಮತಗಳ, ಕಮ್ಯೂನಿಸ್ಟ್ ರ ಸ್ವಭಾವವೇ ಹಾಗೆ. ಇದೇ ರೀತಿ ಸ್ವಲ್ಪ ಆದರ ತೋರಿಯೇ ಅಮೆರಿಕೆಯ ಕೆಂಪು ಭಾರತೀಯರು ಆಪತ್ತು ತಂದುಕೊಂಡು ನಿರ್ನಾಮವಾದರು. ಕೊಲಂಬಸ್ ಮತ್ತು ಸಂಗಡಿಗರಿಗೆ ಅಲ್ಲಿ ತಿನ್ನಲು ಆಹಾರ ಜಾಗ ಕೊಟ್ಟು ಸ್ವರಕ್ಷಣೆ ಮಾಡಿಕೊಳ್ಳದ ಮುಗ್ಧರು ಕೊಲ್ಲಲ್ಪಟ್ಟರು.
ಕೆಂಪು ಭಾರತೀಯರು ಎಂದರೆ ಯಾರು..? ಅವರು ಬೇರೆ ಯಾರು ಅಲ್ಲ ಜನಮೇಜಯ ಮಹಾರಾಜನ ಸರ್ಪಯಾಗದ ಕಾಲದಲ್ಲಿ ಹೊರಹೋದ “ನಾಗಾ” ಜನರು. ಹೀಗೆ ಈ ಆಕ್ರಮಣ ದೃಷ್ಟಿ ಯಿಂದ ನಮ್ಮನ್ನು ನಿರ್ನಾಮಮಾಡಬಯಸುವ ಇಂತಹ ಧರ್ಮ ವಿರೋಧಿ ದೇಶ ವಿರೋದಿಗಳ ಜೊತೆ ಸಹಬಾಳ್ವೆ ಸಾಧ್ಯವೇ..? ಖಂಡಿತವಾಗಿಯೂ ಇದು ಸಾಧ್ಯವಿಲ್ಲ.
✍🏻 ಎಸ್ ಕೆ ಬಂಗಾಡಿ
ಇನ್ನಷ್ಟು ಧರ್ಮದ ಬಗ್ಗೆ ಓದಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ