ವಾಸ್ತು ಶಾಸ್ತ್ರದಲ್ಲಿ ಸ್ಥಿರ ವಾಸ್ತು ಚರವಾಸ್ತು ಎಂಬುದಾಗಿ ಎರಡು ರೀತಿಯಲ್ಲಿ ಹೇಳಿರುತ್ತದೆ. ನಮ್ಮಲ್ಲಿ ಸ್ಥಿರ ವಾಸ್ತುವಿನ ಕ್ರಮವನ್ನು ಅನುಸರಿಸಿ ಗೃಹವನ್ನು ನಿರ್ಮಿಸುತ್ತಾರೆ.

ಮನೆಗಳಿಗೆ ದ್ವಾರವನ್ನು ಇಡುವ ಕ್ರಮ

ನವಭಾಗಂ ಗೃಹಂ ಕೃತ್ವಾಪಂಚಭಾಗಸ್ತು ದಕ್ಷಿಣೆ ।
ತ್ರಿಭಾಗನ್ ವಾಮತಃ ಕೃತ್ವಾ ಶೇಷಂ ದ್ವಾರಸ್ಯ ಲಕ್ಷಣಂ॥

ಮನೆಯ ಎದುರಿನ ಗೋಡೆಯನ್ನು ಒಂಭತ್ತು ಪಾಲು ಮಾಡಿ ಅದರ ಐದು ಪಾಲು ಬಲಭಾಗಕ್ಕೂ (ದಕ್ಷಿಣಕ್ಕೂ) ಮೂರು ಪಾಲು ಎಡಭಾಗಕ್ಕೂ (ಉತ್ತರಕ್ಕೂ) ಬಿಟ್ಟು ಅದರ ಮಧ್ಯದಲ್ಲಿ ಮನೆಯ ಪ್ರವೇಶ ದ್ವಾರವನ್ನು ಇಡಬೇಕು. ದಕ್ಷಿಣದಲ್ಲಿ ಮನೆಯ ಪ್ರವೇಶ ದ್ವಾರ ಇರಬಾರದು.

ಮನೆಯ ಒಳಗಿನ ಕೋಣೆ ಹೇಗಿರಬೇಕೆಂದರೆ

ಪೂರ್ವಆಗ್ನೇಯಪಶ್ಚಿಮ ದಿಕ್ಕಿನಲ್ಲಿ ಪಾಕಶಾಲೆಯನ್ನು ಕೋಣೆಯನ್ನು ನಿರ್ಮಿಸಬೇಕು ಮತ್ತು ಅದರ ಜೊತೆಗೆ ಇದೇ ದಿಕ್ಕಿನಲ್ಲಿ ಭೋಜನ ಶಾಲೆಯನ್ನು ನಿರ್ಮಿಸಬಹುದು.

ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ದೇವಪೂಜಾಸ್ಥಾನವಿರಬೇಕು. ಶಯನಗಾರವು ವಾಯುವ್ಯ ಉತ್ತರ ಭಾಗದಲ್ಲಿ ಉತ್ತಮವು. ಇದೇ ದಿಕ್ಕಿನಲ್ಲಿ ವಿದ್ಯಾಭ್ಯಾಸ ಮಾಡಲು ಯೋಗ್ಯವಾಗಿದೆ. ಪಶ್ಚಿಮ ಭಾಗದಲ್ಲಿ ದ್ರವ್ಯ ಸ್ಥಾಪನೆಯ ಅಂಕಣಕ್ಕೆ ಉತ್ತಮ. ಇನ್ನು ಸ್ನಾನದ ಕೋಣೆ ಮತ್ತು ಕಕ್ಕುಸು ಆಯದೊಳಗೆ ಸಮಂಜಸವಲ್ಲ.

ಮನೆಯ ಉತ್ತರ ಪೂರ್ವ ದಿಕ್ಕುಗಳಲ್ಲಿ ಬಾವಿ ಮಾಡುವುದು ಉತ್ತಮ ವಾಯುವ್ಯದಲ್ಲಿ ಬಾವಿಗೆ ಯೋಗ್ಯವಲ್ಲ.

ಇನ್ನಷ್ಟು ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯದ ಬಗ್ಗೆ ತಿಳಿಯಲು ಕಾಲ ನಿರ್ಣಯ ವೆಬ್ಸೈಟ್ ವೀಕ್ಷಿಸಿ
ಹೆಚ್ಚಿನ ಮಾಹಿತಿಗಾಗಿ ಕಾಲ ನಿರ್ಣಯ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹೆಚ್ಚು ಹೆಚ್ಚು ಮಂದಿಗೆ ಷೇರ್ ಮಾಡಿ